ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರಿಗೆ ಪ್ರಶಸ್ತಿ: ಡಿಸಿಗೆ ದೂರು

Last Updated 2 ಡಿಸೆಂಬರ್ 2020, 15:33 IST
ಅಕ್ಷರ ಗಾತ್ರ

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ 2019 ಮತ್ತು 2020ನೇ ಸಾಲಿನ ಪ್ರಶಸ್ತಿ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಾಗೂ ಅನರ್ಹರಿಗೆ ಪ್ರಶಸ್ತಿ ನೀಡಲಾಗದೆ ಎಂದು ಆರೋಪಿಸಿ ಸಾಹಿತಿಗಳು, ಲೇಖಕರು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಪ್ರಶಸ್ತಿಗೆ ಆಯ್ಕೆಯಾಗಿರುವ ಕೆಲವರ ಮೇಲೆ ಕೃತಿ ಚೌರ್ಯದ ಆರೋಪ ಇದೆ. ಹೀಗಾಗಿ ಪ್ರಶಸ್ತಿ ನೀಡುವ ಮೊದಲು ಈ ಬಗ್ಗೆ ಕೂಲಂಕಷವಾಗಿ ವಿಮರ್ಶಿಸಬೇಕು ಎಂದು ಮನವಿ ಮಾಡಿದರು.

ಪ್ರಶಸ್ತಿ ಆಯ್ಕೆ ಸಮಿತಿಯು ಜಿಲ್ಲಾಧಿಕಾರಿಗಳಸಮ್ಮುಖದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸಭೆ ನಡೆಸದೇ ಧಾರವಾಡದಲ್ಲಿ ಸಾಹಿತಿಯೊಬ್ಬರ ಮನೆಯಲ್ಲಿ ಸಭೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ, ಆಯ್ಕೆ ಸಮಿತಿಯಲ್ಲಿರುವ ಸದಸ್ಯರ ಅವಧಿ ಮುಗಿದಿದ್ದರೂ ಅವರನ್ನೇ ಮುಂದುವರಿಸಲಾಗಿದ್ದು, ತಕ್ಷಣ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಪ್ರಶಸ್ತಿ ಆಯ್ಕೆ ಸಮಿತಿಗೆ ಸ್ಥಳೀಯರನ್ನು ನೇಮಕ ಮಾಡಬೇಕು, ಪ್ರಶಸ್ತಿ ನೀಡುವಾಗ ಸ್ಥಳೀಯರನ್ನು ಗುರುತಿಸಬೇಕು ಎಂದು ಕೋರಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಈ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಹಿತಿಗಳಾದ ಸಿದ್ದರಾಮ ಉಪ್ಪಿನ, ಎಸ್‌.ಆರ್‌.‍ಪಾಟೀಲ, ರಾಜಶೇಖರ ಭೋವಿ, ಸಂತೋಷ ಚನ್ನಬಸಪ್ಪ ಹತ್ತಿ, ಡಾ.ಆರ್‌.ಎಸ್‌.ಕತ್ತಿ, ಎಂ.ಐ.ಪತ್ತಾರ, ರಾಜೇಂದ್ರಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT