ಪ್ರಾಧಿಕಾರ ಕಾರ್ಯಚಟುವಟಿಕೆ ಚುರುಕುಗೊಳಿಸಲು ಸಿಎಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ವಿಶೇಷ ಅನುದಾನ ಪ್ಯಾಕೇಜ್ ಘೋಷಿಸಿ ಬಸವಭೂಮಿ ಅಭಿವೃದ್ಧಿಗೆ ಮುಂದಾಗಬೇಕು
-ಅರವಿಂದ ಕುಲಕರ್ಣಿ ಹೋರಾಟಗಾರ
ಕಂದಾಯ ಆಯುಕ್ತರಿಗೆ ಪತ್ರ
ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಹಿಂದಿನ ಕೂಡಲಸಂಗಮ ಪ್ರಾಧಿಕಾರದಿಂದ ಹಸ್ತಾಂತರಿಸಿಕೊಳ್ಳುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಇತ್ತೀಚೆಗೆ ಪ್ರಾಧಿಕಾರದ ಪ್ರಭಾರ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಚೇರಿ ಅನುದಾನ ಸೇರಿದಂತೆ ಎಲ್ಲಾ ವಿಚಾರಗಳ ಕುರಿತು ಕಂದಾಯ ಆಯುಕ್ತಾಲಯಕ್ಕೆ ಸದ್ಯದಲ್ಲೇ ಪತ್ರ ಬರೆಯಲಿದ್ದೇನೆ. ಕಂದಾಯ ಇಲಾಖೆ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಬಳಿಕವೇ ಪೂರ್ಣ ಮಾಹಿತಿ ತಿಳಿಯಲಿದೆ - ಗುರುನಾಥ ದಡ್ಡೆ ಪ್ರಭಾರ ಆಯುಕ್ತರು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ