ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಿತು ಮಾಡಿದವ ಮಾತ್ರ ಶರಣರಾಗಲು ಸಾಧ್ಯ: ವೈ. ಎಸ್.ಸೋಮನಕಟ್ಟಿ

ಆರೂಢರ ಜಯಂತ್ಯುತ್ಸವ, ಗ್ರಾಮಕ್ಕೆ ಆರೂಢನಂದಿಹಾಳ ನಾಮಕರಣ
Published 25 ಜೂನ್ 2024, 14:33 IST
Last Updated 25 ಜೂನ್ 2024, 14:33 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ನಂದಿಹಾಳ ಪಿಎಚ್ ಗ್ರಾಮವು ಶ್ರೀಗುರು ಆರೂಢರ ಐಕ್ಯ ಕ್ಷೇತ್ರವಾಗಿದೆ. ಭಕ್ತರ ಮನವಿಯಂತೆ ಸರ್ಕಾರ ಈ ಗ್ರಾಮಕ್ಕೆ ನಂದಿಹಾಳ ಪಿಎಚ್ ಬದಲಾಗಿ ಆರೂಢ ನಂದಿಹಾಳ ಎಂದು ನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿದೆ ಎಂದು ತಹಶೀಲ್ದಾ‌ರ್ ವೈ. ಎಸ್.ಸೋಮನಕಟ್ಟಿ ಹೇಳಿದರು.

ತಾಲ್ಲೂಕಿನ ಆರೂಢನಂದಿಹಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಗುರು ಆರೂಢರ 116ನೇ ಜಯಂತ್ಯುತ್ಸವ ಹಾಗೂ ಗ್ರಾಮಕ್ಕೆ ಆರೂಢನಂದಿಹಾಳ ನಾಮಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಒಳಿತು ಮಾಡಿದವರು ಮಾತ್ರ ಆರೂಢರಂತೆ ಮಹಾನ್ ಶರಣರಾಗಲು ಸಾಧ್ಯ ಎಂದು ಹೇಳಿದರು.

ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಮಾತನಾಡಿ, ಆರೂಢರ ಕೃಪೆಯಿಂದ ಇಂದು ಅಡವಿ ನಂದಿಹಾಳ ಹೋಗಿ ಆರೂಢನಂದಿಹಾಳವಾಗಿದೆ. ಒಂದೇ ಜನ್ಮದಲ್ಲಿ ಸಪ್ತಭೂಮಿಕೆಗಳನ್ನು ಸಾಧಿಸಿದವರು ಆರೂಢರು ಮಾತ್ರ ಎಂದು ಹೇಳಿದರು.

ಅರಟಾಳದ ಸಿದ್ದಾರೂಢ ಮಠದ ಶಿವಪುತ್ರ ಶರಣರು, ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಹುಣಶ್ಯಾಳ ಪಿಬಿಯ ಶಂಕ್ರಣ ಆಲೂರ, ಶ್ರೀಗುರು ಆರೂಢರ ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಶೈಲ ಕನ್ನೂರ ಮಾತನಾಡಿದರು.

ಶಾಂತಯ್ಯ ಹಿರೇಮಠ, ಬಮ್ಮಯ್ಯ ಹಿರೇಮಠ, ರಾಮಚಂದ್ರ ಸಾಸನೂರ, ಖಾಸ್ಗತ ಸಜ್ಜನ, ಬಸಯ್ಯ ಹಿರೇಮಠ, ಕೆಂಚು ವಾಲೀಕಾರ, ಇರಗಂಟೆಪ್ಪ ಸಜ್ಜನ, ಗುರುನಾಥ ಸಜ್ಜನ, ಸಿದ್ದಾರೂಢ ಮದರಿ, ಶಾಂತು ಕನ್ನೂರ ಇದ್ದರು.

ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೂಢನಂದಿಹಾಳ ಎಂಬ ಗ್ರಾಮದ ನಾಮಫಲಕವನ್ನು ತಹಶೀಲ್ದಾರ್ ವೈ. ಎಸ್.ಸೋಮನಕಟ್ಟಿ ಅನಾವರಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT