ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಬೆಸ್ಟ್‌ ಪ್ರಾಜೆಕ್ಟ್ ಆಫ್‌ ದಿ ಇಯರ್’: ಸಗಣಿಯಿಂದ ತಯಾರಾದ ಬಣ್ಣಕ್ಕೆ ಪ್ರಶಸ್ತಿ

Published : 20 ಆಗಸ್ಟ್ 2024, 14:26 IST
Last Updated : 20 ಆಗಸ್ಟ್ 2024, 14:26 IST
ಫಾಲೋ ಮಾಡಿ
Comments

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಫ.ಗು.ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಬಿ.ಎಂ.ಅಂಗಡಿ ಹಾಗೂ ಪ್ರೊ.ಎಸ್.ಛಪ್ಪರ ಅವರ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸೂರಜ್ ಪರಮಶೆಟ್ಟಿ, ಅದ್ನಾನ್ ಇನಾಮದಾರ ಸೈಫ್‌ ಶೇಖ್‌ ಅವರು ಹಸುವಿನ ಸಗಣಿಯಿಂದ ಸಾವಯವ ಬಣ್ಣ (ಪೇಂಟ್‌) ತಯಾರಿಸಿದ್ದಾರೆ.

ಕಲಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ಜರುಗಿದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ 47ನೇ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ‘ಬೆಸ್ಟ್‌ ಪ್ರಾಜೆಕ್ಟ್ ಆಫ್‌ ದಿ ಇಯರ್’ ಪ್ರಶಸ್ತಿಗೆ ಈ ಸಗಣಿಯಿಂದ ತಯಾರಿಸಿದ ಪೇಂಟ್‌ನ ಪ್ರಾಜೆಕ್ಟ್ ಆಯ್ಕೆಯಾಗಿದೆ.

ಸಗಣಿಯಲ್ಲಿ ಸಮ ಪ್ರಮಾಣದ ನೀರು ಬೆರೆಸಿ ನಂತರ ಬಣ್ಣ ಬದಲಾಗುವವರೆಗೂ ಯಂತ್ರದಲ್ಲಿ ಗೋಡಾಯಿಸಿ ಅದರಿಂದ ಚಟ್ಟವನ್ನು ಬೇರ್ಪಡಿಸಿ ಕೆಲವೊಂದು ಹಾನಿಕಾರಕವಲ್ಲದ ರಾಸಾಯನಿಕಗಳನ್ನು ಬಳಸಿ ನಿಗದಿತ ಉಷ್ಣತೆಯೊಂದಿಗೆ ಸಮೀಕರಣಗೊಳಿಸಿದಾಗ ಅಂತಿಮವಾಗಿ ಬಿಳಿ ಬಣ್ಣದ ಪೇಂಟ್ ಉಪಯೋಗಕ್ಕೆ ಸಿದ್ದವಾಗುತ್ತದೆ ಎಂದು ಪ್ರೊ.ಬಿ.ಎಂ.ಅಂಗಡಿ ವಿವರಿಸಿದರು.

ಇದರ ಉಪಯೋಗದಿಂದ ಕೋಣೆಯ ತಾಪಮಾನ ಕನಿಷ್ಠ 5 ಡಿಗ್ರಿ ಸೆಲ್ಸಿಯಸ್‌ವರೆಗೂ ಕಡಿಮೆಯಾಗಲಿದ್ದು, ಇದು ವಾತಾವರಣಕ್ಕೆ ಸಹಕಾರಿ. ಅನಾವಶ್ಯಕ ಹವಾನಿಯಂತ್ರಕ ಬಳಕೆ, ಫ್ಯಾನುಗಳ ಬಳಕೆಯನ್ನು ತಗ್ಗಿಸಿ ವಿದ್ಯುತ್ ಉಳಿತಾಯ ಕೂಡ ಮಾಡಬಹುದು ಎಂದರು.

ಈ ಸಗಣಿಯ ಬಣ್ಣವು ಅಪಾಯಕಾರಿ ವಿಕಿರಣಗಳನ್ನು ಕೂಡ ತಡೆಯಬಲ್ಲದು. ಈ ಪೇಂಟ್ ಭವಿಷ್ಯದಲ್ಲಿ ಹೆಚ್ಚು ಮಹತ್ವ ಪಡೆಯಲಿದೆ ಎಂಬ ನಿರೀಕ್ಷೆ ಇದೆ ಎಂದರು.

ಫ.ಗು.ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ವಿ.ಜಿ.ಸಂಗಮ, ಉಪ ಪ್ರಾಂಶುಪಾಲ ಜಿ.ವಿ.ಪಾಟೀಲ, ಪಿ.ವಿ.ಮಳಜಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT