ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಚಾವ್ ಯಾತ್ರೆ: ಸೈಕಲ್‌ನಲ್ಲಿ ಯುವಕನ ಪ್ರಚಾರ

Published 27 ಫೆಬ್ರುವರಿ 2024, 16:01 IST
Last Updated 27 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ‘ಭಾರತ ಬಚಾವ್, ಬಿಜೆಪಿಗೆ ಮತ ನೀಡಿ’ ಎಂಬ ಫಲಕದೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಧಾರವಾಡದ ಯುವಕನೊಬ್ಬ ಏಕಾಂಗಿ ಪ್ರಚಾರ ಕೈಗೊಂಡು ಗಮನ ಸೆಳೆದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಆಗಮಿಸಿದ ಧಾರವಾಡದ ಭರತ ಜೈನ್ ಎಂಬ ಯುವಕ ಭಾರತ ಮಾತೆ, ಕೃಷ್ಣಾರ್ಜುನರು, ಸ್ವಾಮಿ ವಿವೇಕಾನಂದ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಎಪಿಜೆ ಅಬ್ದುಲ್ ಕಲಂ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ, ಜೆ.ಪಿ.ನಡ್ಡಾ, ನಳೀನಕುಮಾರ ಕಟೀಲು ಅವರ ಚಿತ್ರಗಳಿರುವ ಫಲಕದೊಂದಿಗೆ ಏಕಾಂಗಿಯಾಗಿ ಇದೇ ಫೆ.18 ರಂದು ಧಾರವಾಡದಿಂದ ಸೈಕಲ್ ಯಾತ್ರೆ ಆರಂಭಿಸಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮೂಲಕ ಪಟ್ಟಣಕ್ಕೆ ಬಂದರು.

ಭರತ್‌ ಅವರು ₹ 10 ಸಾವಿರ ಹಣದಲ್ಲಿ ಹೊಸದಾಗಿ ಸೈಕಲ್ ಕೊಂಡು ಯಾತ್ರೆಯ ಮೂಲಕ ಕಲಬುರಗಿ, ರಾಯಚೂರ, ಬಳ್ಳಾರಿ ಸೇರಿದಂತೆ ಕರ್ನಾಟಕದ ಹೆಚ್ಚು ಜಿಲ್ಲೆಗಳನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿ ಚುನಾವಣೆಯ ಮತದಾನದ 10 ದಿನಗಳ ಮುಂಚಿತ ಯಾತ್ರೆ ಮುಕ್ತಾಯಗೊಳಿಸುವುದಾಗಿ ತಿಳಿಸಿದರು.

ಯಾತ್ರೆಯಲ್ಲಿ ತೆರಳುತ್ತಿರುವ ತಾವು ಗ್ರಾಮಗಳ ಹಾಗೂ ತೋಟದ ಜನತೆಗೆ ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ವಿವರಿಸಿದರು. ಯಾತ್ರೆಯ ಆರಂಭದಿಂದ ತಮಗೆ ಗ್ರಾಮಗಳಲ್ಲಿ ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಹಕಾರ ನೀಡಿದರೆ, ಕೆಲವರು ಕಿರಿಕಿರಿ ಮಾಡಿದರು ಎಂದು ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT