ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಭವ್ಯ ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿ

ಶ್ರೀರಾಮ ಮಂದಿರ ನಿರ್ಮಾಣ; ಚಡಚಣದಲ್ಲಿ ಉಮೇಶ ಕಾರಜೋಳ ನೇತೃತ್ವದಲ್ಲಿ ನಿಧಿ ಸಂಗ್ರಹ
Last Updated 2 ಫೆಬ್ರುವರಿ 2021, 13:25 IST
ಅಕ್ಷರ ಗಾತ್ರ

ವಿಜಯಪುರ: ಬಿ.ಜೆ.ಪಿ. ಮುಖಂಡ ಉಮೇಶ ಗೋ.ಕಾರಜೋಳ ಅವರು ಪಕ್ಷದ ಕಾರ್ಯಕರ್ತರೊಡನೆ ಸೇರಿ ಚಡಚಣ ಪಟ್ಟಣದಲ್ಲಿ ಮಂಗಳವಾರ ಮನೆ ಮನೆಗೆ ತೆರಳಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಿದರು.

ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಎಲ್ಲರೂ ಶ್ರದ್ಧಾಭಾವನೆಯೊಂದಿಗೆ ಪಾಲ್ಗೊಳ್ಳೊಣ ಎಂದುಉಮೇಶ ಕಾರಜೋಳ ಹೇಳಿದರು.

492 ವರ್ಷಗಳ ಹೋರಾಟದ ಫಲವಾಗಿ ಅಯ್ಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಪ್ರಭು ಶ್ರೀರಾಮನ ಮಂದಿರವು ಸುಂದರ ಮತ್ತು ಭವ್ಯವಾದ ದೇವಾಲಯಗಳಲ್ಲಿ ಒಂದಾಗಲಿದೆ. ಇದರಿಂದ ಭಾರತೀಯರಷ್ಟೇ ಅಲ್ಲದೆ, ವಿದೇಶಿಯರು ಪ್ರವಾಸಕ್ಕೆ ಆಗಮಿಸಿದಾಗ ಮೊದಲು ರಾಮನ ದರ್ಶನ ಪಡೆಯುವಂತಾಗುತ್ತದೆ ಎಂದರು.

ಮಂದಿರ ನಿರ್ಮಾಣಕ್ಕಾಗಿ ದೇಶದ ಪ್ರತಿ ಮನೆಯಿಂದ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಈ ಮಂದಿರ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದು ಭಾರತ ಹಿರಿಮೆ, ಗರಿಮೆ ಉತ್ತುಂಗಕ್ಕೆರಲಿದೆ ಎಂದು ಹೇಳಿದರು.

ಬೆಳಗಾವಿಯ ವಿಭಾಗಿಯ ಸಂಘಟನಾ ಪ್ರಭಾರ ಪ್ರಕಾಶ ಅಕ್ಕಲಕೋಟ, ರಾಜ್ಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ರಾಮಣ್ಣ ಅವಟಿ, ಜಿ.ಪಂ. ಸದಸ್ಯ ಭೀಮುಸಾಹುಕಾರ ಬಿರಾದಾರ, ಪ.ಪಂ. ಸದಸ್ಯ ವಿಜಯಕುಮಾರ ಅವಟಿ, ಅಪ್ಪುಗೌಡ ಪಾಟೀಲ ಗೋವಿಂದಪುರ, ರಾಜಕುಮಾರ ಸಗಾಯಿ ಗಂಟಗಲಿ, ಶಿವಾನಂದ ಕಟ್ಟಿ, ಅಶೋಕ ಕುಲಕರ್ಣಿ, ರಾಜೇಂದ್ರ ಮುತ್ತಿನ, ಮಹಾದೇವ ಬಗಲಿ, ಸುನೀಲಬೈರವಾಡಗಿ, ನಾಗನಾಥ ಬಿರಾದಾರ, ಗೌಡೇಶಗೌಡ ಪಾಟೀಲ, ಮಲ್ಲೇಶಪ್ಪ ಡೊಳ್ಳಿ, ಅಪ್ಪುಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT