ದೇವರಹಿಪ್ಪರಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಕಾರು ಅಪಘಾತದಲ್ಲಿ ತಾಯಿ, ಮಗ ಮೃತಪಟ್ಟ ಘಟನೆ ಗುರುವಾರ ಜರುಗಿದೆ.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಇಟ್ಟಿಗೆ ಭಟ್ಟಿಯ ಹತ್ತಿರ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದು ಅಪಘಾತವಾಗಿದೆ. ಸ್ಥಳದಲ್ಲಿಯೇ ಅಂಬರೀಷ ಮಲಕಣ್ಣ ಆರಿಗೇರಿ (25) ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ತಾಯಿ ಇಂದಿರಾಬಾಯಿ ಮಲಕಣ್ಣ ಆರಿಗೇರಿ (50) ಮೃತಪಟ್ಟಿದ್ದಾರೆ.
ಮೂಲತ ಅಫಜಲಪುರ ಪಟ್ಟಣದವರಾದ ಆರಿಗೇರಿ ಕುಟುಂಬದವರು ಶಿಕ್ಷಣಕ್ಕಾಗಿ ದೇವರಹಿಪ್ಪರಗಿಯಲ್ಲಿ ಮನೆ ಮಾಡಿಕೊಂಡಿದ್ದು, ವಿಜಯಪುರ ಖಾಸಗಿ ಆಸ್ಪತ್ರೆಗೆ ತನ್ನ ಅಜ್ಜಿಯ ಕಣ್ಣಿನ ಚಿಕಿತ್ಸೆಗಾಗಿ ಅಂಬರೀಶ ತನ್ನ ತಾಯಿ, ಅಣ್ಣನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು.
ಪಟ್ಟಣ ಬಿಟ್ಟು ಕೆಲವೇ ಕಿ.ಮೀ ಅಂತರದಲ್ಲಿ ಹೆದ್ದಾರಿಯಲ್ಲಿ ಅಡ್ಡ ಬಂದ ಕುದುರೆಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಾರು ಉರುಳಿಬಿದ್ದು ಘಟನೆ ಸಂಭವಿಸಿತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.