ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ | ಮರಕ್ಕೆ ಕಾರು ಡಿಕ್ಕಿ: ಇಬ್ಬರ ಸಾವು 

Published 5 ಮೇ 2024, 7:04 IST
Last Updated 5 ಮೇ 2024, 7:04 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ ಢವಳಗಿ ಹಳ್ಳದ ಸಮೀಪದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕಾರು ಚಲಾಯಿಸುತ್ತಿದ್ದ ಮಸಬಿನಾಳದ ದೊಡ್ಡಯ್ಯ ರಾಚಯ್ಯ ಪುರಾಣಿಕಮಠ(37), ತಾಳಿಕೋಟಿ ತಾಲ್ಲೂಕಿನ ಜಲಪೂರದ ಪುಷ್ಪಾವತಿ ಶಿವಪುತ್ರಯ್ಯ ಹಿರೇಮಠ (55) ಮೃತರು. ಮಾಜಿ ಸೈನಿಕರಾಗಿದ್ದ ದೊಡ್ಡಯ್ಯ ಹಾಗೂ ಪುಷ್ಪಾವತಿ ಸಹೋದರ,ಸಹೋದರಿಯರು.

ಕಾರಿನಲ್ಲಿದ್ದ ಮಸಬಿನಾಳದ ಈರಮ್ಮ ದೊಡ್ಡಯ್ಯ ಪುರಾಣಿಕಮಠ(30), ಶಿವಕುಮಾರ ದೊಡ್ಡಯ್ಯ ಪುರಾಣಿಕಮಠ(11), ಸಂಪತಕುಮಾರ ದೊಡ್ಡಯ್ಯ ಪುರಾಣಿಕಮಠ(8) ಗಾಯಗೊಂಡಿದ್ದಾರೆ.

ಮದುವೆಗೆ ಹೋಗಿ ವಾಪಸ್ ಊರಿಗೆ ತೆರಳುವ ಸಂದರ್ಭದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT