ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ | ವಿಧ ಗ್ರಾಮಗಳಿಗೆ ಸಿಇಒ ಭೇಟಿ: ಕಾಮಗಾರಿ ಗುಣಮಟ್ಟ, ನಿರ್ವಹಣೆಗೆ ಸೂಚನೆ

Published 26 ಫೆಬ್ರುವರಿ 2024, 13:41 IST
Last Updated 26 ಫೆಬ್ರುವರಿ 2024, 13:41 IST
ಅಕ್ಷರ ಗಾತ್ರ

ತಾಳಿಕೋಟೆ: ತಾಲ್ಲೂಕಿನ ಕೊಣ್ಣೂರ ಮತ್ತು ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ರಿಷಿ ಆನಂದ ಭಾನುವಾರ ಭೇಟಿ ನೀಡಿ ವಿವಿಧ ಇಲಾಖೆಗಳ ಅಡಿ ಕೈಗೊಂಡ ಕಾಮಗಾರಿ ಪರಿಶೀಲನೆ ನಡೆಸಿದರು.

ಕೊಣ್ಣೂರ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆ ಅಡಿ ನಿರ್ಮಿಸಲಾದ ಶಾಲಾ ಕಂಪೌಂಡ್, ನಿರ್ಮಾಣ ಹಂತದಲ್ಲಿ ಇರುವ ಅಡುಗೆ ಕೋಣೆ, ಹೈಟೆಕ್ ಶೌಚಾಲಯ ಕಾಮಗಾರಿ ವೀಕ್ಷಣೆ ಮಾಡಿದರು. ಸದರಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಶಾಲಾ ಮಕ್ಕಳಿಗೆ ವ್ಯವಸ್ಥಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೊಠಡಿಗಳಲ್ಲಿ ಪ್ಯಾನ್ ಅಳವಡಿಸಲು ಹಾಗೂ ಆವರಣದಲ್ಲಿ ಸಸಿ ನೆಡಲು ಪಿಡಿಒ ಅವರಿಗೆ ತಿಳಿಸಿದರು.

ಐತಿಹಾಸಿಕ ಕಲ್ಯಾಣಿ ಕಾಮಗಾರಿ ಮತ್ತು ಚಿನ್ಮೇಯಶ್ವರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಟೆಕ್ ಶೌಚಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಇವುಗಳ ನಿರ್ವಹಣೆಗೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಪಡೇಕನೂರ ಗ್ರಾಮಕ್ಕೆ ಭೇಟಿ ನೀಡಿ ಎಸ್.ಬಿ.ಎಂ ಯೋಜನೆಯಡಿ ನಿರ್ಮಾಣವಾದ ಸಮುದಾಯ ಶೌಚಾಲಯ, ಎಸ್.ಬಿ.ಎಂ ಮತ್ತು ನರೇಗಾ ಯೋಜನೆಯ ಒಗ್ಗೂಡಿಸುವಿಕೆ ಅಡಿ ನಿರ್ಮಾಣವಾದ ಬೂದು ನೀರು ನಿರ್ವಹಣೆ ಕಾಮಗಾರಿ ವೀಕ್ಷಣೆ ಮಾಡಿ ತಾ.ಪಂ. ಇಓ ಅವರಿಗೆ ಮೇಲ್ವಿಚಾರಣೆ ಮಾಡಲು ತಿಳಿಸಿದರು.

ಬೊಮ್ಮನಹಳ್ಳಿ ಗ್ರಾ.ಪಂ ಬೊಮ್ಮನಹಳ್ಳಿಯ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರೆಡ್ (PRED) ಮತ್ತು ಮನರೇಗಾ ಯೋಜನೆಯ ಒಗ್ಗೂಡಿಸುವಿಕೆ ಅಡಿ ನಿರ್ಮಾಣ ಮಾಡಿದ ಎರಡು ಅಂಗನವಾಡಿ ಕೇಂದ್ರಗಳನ್ನು ವೀಕ್ಷಿಸಿ ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುಂತೆ ಸೂಚಿಸಿದರು.

ತಾಳಿಕೋಟೆ:ತಾಲ್ಲೂಕಿನ ತಾಲ್ಲೂಕಿನ ಕೊಣ್ಣೂರ ಮತ್ತು ಬೊಮ್ಮನಹಳ್ಳಿ ಗ್ರಾಮ ಪಂಚಾಯತಿಗಳಿಗೆ ವಿಜಯಪುರ ಜಿಲ್ಲಾ ಪಂಚಾಯತಿಯ ಸಿಇಓ  ರಿಷಿ ಆನಂದ ಅವರು ಭಾನುವಾರ ಭೇಟಿ ನೀಡಿ ವಿವಿಧ ಇಲಾಖೆಗಳಡಿ ಕೈಗೊಂಡ ಕಾಮಗಾರಿಗಳ ಸ್ಥಾನಿಕ ಸ್ಥಳ ಪರಿಶೀಲನೆ ನಡೆಸಿದರು.  
ತಾಳಿಕೋಟೆ:ತಾಲ್ಲೂಕಿನ ತಾಲ್ಲೂಕಿನ ಕೊಣ್ಣೂರ ಮತ್ತು ಬೊಮ್ಮನಹಳ್ಳಿ ಗ್ರಾಮ ಪಂಚಾಯತಿಗಳಿಗೆ ವಿಜಯಪುರ ಜಿಲ್ಲಾ ಪಂಚಾಯತಿಯ ಸಿಇಓ  ರಿಷಿ ಆನಂದ ಅವರು ಭಾನುವಾರ ಭೇಟಿ ನೀಡಿ ವಿವಿಧ ಇಲಾಖೆಗಳಡಿ ಕೈಗೊಂಡ ಕಾಮಗಾರಿಗಳ ಸ್ಥಾನಿಕ ಸ್ಥಳ ಪರಿಶೀಲನೆ ನಡೆಸಿದರು.  

ತಾ.ಪಂ ಇ.ಓ. ಬಿ.ಆರ್.ಬಿರಾದಾರ, ಕೊಣ್ಣೂರ ಗ್ರಾ.ಪಂ ಅದ್ಯಕ್ಷೆ ರೇಣುಕಾ ಮಾದರ, ಸಹಾಯಕ ನಿರ್ದೇಶಕಿ (ಗ್ರಾ.ಉ.ಖಾ) ಸುಜಾತ ಯಡ್ರಾಮಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ಆರ್.ಎಸ್.ಹಿರೇಗೌಡ್ರ, ಪ್ರೆಡ್ ಎಇಇ ಶಿವರಾಜ ನಾಯಕ, ಸಾಮಾಜಿಕ ಅರಣ್ಯ ಇಲಾಖೆಯ ಡಿಆರ್‌ಎಫ್ಒ ಅಶೋಕ ಚವ್ಹಾಣ, ಪಿಡಿಒ ಸಾವಿತ್ರಿ ಬಿರಾದಾರ, ಪ್ರಭು ಚನ್ನೂರ, ಪಂಚಾಯಿತಿ ಸದಸ್ಯರು, ತಾಂತ್ರಿಕ ಸಂಯೋಜಕರು, ಸಹಾಯಕರು, ಐಇಸಿ ಸಂಯೋಜಕ, ಗ್ರಾ.ಪಂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT