ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ, ಚರಂಡಿ ದುರಸ್ತಿಗೆ ಕಾಂಗ್ರೆಸ್‌ ಆಗ್ರಹ

Last Updated 14 ಸೆಪ್ಟೆಂಬರ್ 2022, 15:49 IST
ಅಕ್ಷರ ಗಾತ್ರ

ವಿಜಯಪುರ:ನಗರದ ಹದಗೆಟ್ಟ ರಸ್ತೆ, ಚರಂಡಿ, ಒಳಚರಂಡಿ, ವಿದ್ಯುದ್ವೀಪಗಳ ದುರಾವಸ್ತೆ ಖಂಡಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ,ನಗರದಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನ ತೊಂದರೆಗೆ ಒಳಗಾಗಿದ್ದಾರೆ. ನಗರದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಜನ ನಡೆದಾಡುವುದು ದುಸ್ತರವಾಗಿದೆ ಎಮದು ಆರೋಪಿಸಿದರು.

ಕೇಬಲ್ ಕಂಪೆನಿಗಳು, ಕುಡಿಯುವ ನೀರಿನ ಯೋಜನೆಗಾಗಿ ಟೆಂಡರ್ ಪಡೆದಿರುವ ಕಂಪೆನಿಗಳು ಬೇಕಾಬಿಟ್ಟಿ ರಸ್ತೆಗಳನ್ನು ಅಗೆದು ಅವುಗಳು ಸರಿಯಾಗಿ ಮುಚ್ಚದೇ ಹಾಗೂ ರಿಪೇರಿ ಮಾಡದೇ ಬಿಟ್ಟಿರುವುದರಿಂದ ತೊಂದರೆಗೀಡು ಮಾಡುತ್ತೀವೆ ಎಮದು ಹೇಳಿದರು.

ಮಹಾನಗರ ಪಾಲಿಕೆ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ನಗರ ಶಾಸಕರು ತಮಗೆ ಬೇಕಾದ ಕಡೆ ಮಾತ್ರ ಅಭಿವೃದ್ಧಿ ಮಾಡಿ, ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜೆ.ಎಂ. ರೋಡ್‌, ಹಕೀಂ ಚೌಕನಿಂದ ಬಾಗಲಕೋಟೆ ಕ್ರಾಸ್, ಕೆಇಬಿ ಸಮುದಾಯ ಭವನ ಪಕ್ಕದ ರಸ್ತೆಯಿಂದ ರಾಜಾಜಿನಗರದ ಮುಖ್ಯ ರಸ್ತೆವರೆಗೆ, ಹರಿಯಾಲ್ ಗಲ್ಲಿ, ಕೆ.ಎಚ್.ಬಿ.ಕಾಲೊನಿ, ಬಾಗಾಯತ್‌ ಗಲ್ಲಿ, ಟೇಕಡೇಗಲ್ಲಿ, ಮನಗೂಳಿ ಬೇಸನಿಂದ ಬಡಿಕಮಾನ ವರೆಗೆ, ಆಸಾರ್‌ ಮಹಲ್ ಓಣಿ, ಅತಾವುಲ್ಲಾ ಚೌಕನಿಂದ ಬಸ್ ಸ್ಟ್ಯಾಂಡ್ ವರೆಗೆ, ಸಕಾಫ್‌ ರೋಜಾ, ಅಥಣಿ ಗಲ್ಲಿ, ಲಂಗರ ಬಜಾರ, ಹವೇಲಿ ಗಲ್ಲಿ, ನಿಸಾರ್ ಮೊಹಲ್ಲಾ, ಅಲಿಕರೋಜಾ, ಕಾಸಗೇರಿ ಓಣಿ, ನವಬಾಗ, ಖಾಜಾ ನಗರ, ಮಿನಾಕ್ಷೀಚೌಕ, ಇಬ್ರಾಹಿಂ ರೋಜಾ, ಶಾಹಪೂರ ದರವಾಜಾ, ಶ್ಯಾಪೇಟಿ, ರಹೀಂ ನಗರದಲ್ಲಿ ರಸ್ತೆ, ಒಳಚರಂಡಿ, ವಿದ್ಯುದ್ವೀಪಗಳು ದುರಾವಸ್ತೆಯಲ್ಲಿದ್ದು ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಆದೇಶ ಹೊರಡಿಸಿ, ತಾರತ‌ಮ್ಯದ ಬಗ್ಗೆ ತನಿಖೆ ನಡೆಸಿ ಜನರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಅಹಮದ್ ಬಕ್ಷಿ, ಜಲ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಾಹಪುರ್, ರವೀಂದ್ರ ಜಾದವ್, ವಿದ್ಯಾ ರಾಣಿ ತು೦ಗಳ, ಇರ್ಫಾನ್ ಶೈಕ್, ಕುಲದೀಪ್ ಸಿಂಘ್, ಪ್ರಭಾವತಿ ನಾಟಿಕಾರ್, ವಸಂತ ಹೊನಮಡೆ, ಶರಣಪ್ಪ ಯಕುಂಡಿ, ಮಂಜುನಾಥ ನಿಡೋಣಿ, ದೀಪಾ ಕುಂಬಾರ, ಅಸ್ಮಾ ಕಲೆಭಾಗ್, ಭಾರತಿ ಹೊಸಮನಿ, ಪ್ರೇಮಾ ಗಸ್ತಿ, ಗಂಗೂಬಾಯಿ ಧುಮಲೆ, ಸುಜಾತ ಸಿಂದೆ, ಸುಂದರಪಾಲ ರಾಠೋಡ, ಮಲ್ಲಿಕಾರ್ಜುನ ಪಾರಸಣ್ಣವರ, ಚನ್ನಬಸಪ್ಪ ನಂಧರಗಿ, ಬಿ.ಎಸ್. ಗಸ್ತಿ, ಪ್ರಭಾತ್, ಸುನಂದಾ, ಅಷ್ಪಾಕ್ ಮನಗೂಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT