ಶುಕ್ರವಾರ, ಅಕ್ಟೋಬರ್ 7, 2022
28 °C

ಪಾಲಿಕೆ: ಮೂರು ವಲಯ ಕಚೇರಿ ಶೀಘ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ಅನುಕೂಲವಾಗಿಸುವ ಉದ್ದೇಶದಿಂದ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವಲಯ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

35 ವಾರ್ಡ್‌ಗಳನ್ನು ಒಳಗೊಂಡಿರುವ ಹಾಗೂ ಜಲನಗರನಲ್ಲಿ ಮುಖ್ಯ ಕಚೇರಿ ಇರುವ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಈ ಕೆಳಕಂಡಂತೆ 3 ವಲಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ವಲಯ ಕಚೇರಿ 1: ಗಾಂಧಿಚೌಕ ವಾರ್ಡ್‌. ನಂ.1 ರಿಂದ 11 ರ ವರೆಗೆ ಹಾಗೂ ವಾರ್ಡ್‌ ನಂ.27, 31, 32.

ವಲಯ ಕಚೇರಿ 2: ಬಡಿಕಮಾನ್‌ ರೋಡ್‌ ನಗರ ನೀರು ಸರಬರಾಜು ಕಾರ್ಯಾಲಯ. ವಾರ್ಡ್‌ ನಂ.12 ರಿಂದ 20 ರ ವರೆಗೆ ಹಾಗೂ 24 ರಿಂದ 26 ರ ವರೆಗೆ.

ವಲಯ ಕಚೇರಿ 3: ಜಲನಗರ ಮುಖ್ಯ ಕಚೇರಿಯಲ್ಲಿ ವಾರ್ಡ್‌ ನಂ.21 ರಿಂದ 23 ಮತ್ತು 28 ರಿಂದ 30 ಮತ್ತು 33 ರಿಂದ 35 ರ ವರೆಗೆ.

ಶೀಘ್ರದಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಸೇವೆಗಳಿಗೆ ವಲಯ ಕಚೇರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.