ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ

111 ಗ್ರಾಮ ಪಂಚಾಯ್ತಿಗಳ 2126 ಸ್ಥಾನಗಳಿಗೆ ಚುನಾವಣೆ; ಕಣದಲ್ಲಿ 4997 ಅಭ್ಯರ್ಥಿಗಳು
Last Updated 21 ಡಿಸೆಂಬರ್ 2020, 12:43 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಉಪ ವಿಭಾಗದ ಎಂಟು ತಾಲ್ಲೂಕುಗಳ ವ್ಯಾಪ್ತಿಯ 111 ಗ್ರಾಮ ಪಂಚಾಯ್ತಿಗಳಿಗೆ ಡಿ.22 ರಂದು ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ವಿಜಯಪುರ ತಾಲ್ಲೂಕಿನ 17, ಬಬಲೇಶ್ವರ 15, ತಿಕೋಟಾ 14, ಬಸವನ ಬಾಗೇವಾಡಿ 15, ಕೊಲ್ಹಾರ 8, ನಿಡಗುಂದಿ 8, ಮುದ್ದೇಬಿಹಾಳ 20, ತಾಳಿಕೋಟೆ ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳ2126 ಸ್ಥಾನಗಳಿಗೆ ನಡೆಯುವ ಚುನಾವಣಾ ಕಣದಲ್ಲಿ 4997 ಅಭ್ಯರ್ಥಿಗಳು ಇದ್ದಾರೆ.

209 ಸೂಕ್ಷ್ಮ ಮತಗಟ್ಟೆ

1007 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇವುಗಳ ಪೈಕಿ 209 ಸೂಕ್ಷ್ಮ, 109 ಅತಿ ಸೂಕ್ಷ್ಮ ಹಾಗೂ 689 ಸಾಧಾರಣ ಮತಗಟ್ಟೆ ಎಂದು ಗುರುತಿಸಲಾಗಿದೆ.

ಮಸ್ಟರಿಂಗ್‌

ಆಯಾ ತಾಲ್ಲೂಕು ಕೇಂದ್ರಗಳ ಮಸ್ಟರಿಂಗ್‌ ಕೇಂದ್ರಗಳಿಂದ ಸೋಮವಾರ ಮಧ್ಯಾಹ್ನವೇ 4430 ಚುನಾವಣಾ ಸಿಬ್ಬಂದಿಮತಪೆಟ್ಟಿಗೆ ಹಾಗೂ ಅಗತ್ಯ ಚುನಾವಣಾ ಪರಿಕರಗಳೊಂದಿಗೆ ನಿಯೋಜಿಸಲಾಗಿರುವ ಮತ ಕೇಂದ್ರಗಳಿಗೆ ಪೊಲೀಸ್‌ ಭದ್ರತೆಯೊಂದಿಗೆ ತೆರಳಿ, ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡರು.

3,53,699 ಪುರುಷ ಹಾಗೂ 3,34,981 ಮಹಿಳಾ ಮತ್ತು 67 ಇತರೆ ಮತದಾರರು ಸೇರಿದಂತೆ ಒಟ್ಟು 6,88,767 ಮತದಾರರು ಮಂಗಳವಾರ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಎಡಗೈ ಹೆಬ್ಬೆರಳಿಗೆ ಶಾಹಿ

ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದರು.

30 ಕೋವಿಡ್‌ ಪಾಸಿಟಿವ್‌ ಮತದಾರರು

ಕೋವಿಡ್‌ ಸೋಂಕಿತ ಸಕ್ರಿಯ ರೋಗಿಗಳಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.ವಿಜಯಪುರ ತಾಲ್ಲೂಕಿನಲ್ಲಿ 6, ಬಸವನ ಬಾಗೇವಾಡಿ 17, ಮುದ್ದೇಬಿಹಾಳ 7 ಸೇರಿದಂತೆ ಒಟ್ಟು 30 ಕೋವಿಡ್‌ ಪಾಸಿಟಿವ್‌ ಮತದಾರರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT