ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.23 ಲಕ್ಷ ಮಕ್ಕಳಿಗೆ ಕೋವಿಡ್‌ ಲಸಿಕೆ ಗುರಿ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌

Last Updated 3 ಜನವರಿ 2022, 15:18 IST
ಅಕ್ಷರ ಗಾತ್ರ

ವಿಜಯಪುರ:ಜಿಲ್ಲೆಯಲ್ಲಿ15 ರಿಂದ 18 ರೊಳಗಿನ ವರ್ಷದ1,23,438 ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

15 ರಿಂದ 18 ರೊಳಗಿನ ವರ್ಷದ ಮಕ್ಕಳಿಗೆ ಸೋಮವಾರದಿಂದ ಕೋವ್ಯಾಕ್ಸಿನ ಲಸಿಕೆಯನ್ನು ನೀಡಲಾಗುತ್ತಿದ್ದು, ಮೊದಲನೇಯ ದಿನ 193 ಪದವಿ ಪೂರ್ವ ಕಾಲೇಜುಗಳ 18,626 ಮಕ್ಕಳಿಗೆ ಲಸಿಕಾಕರಣ ಮಾಡಿ ಶೇ 93.13 ಸಾಧನೆ ಮಾಡಲಾಗಿದ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ16.34 ಲಕ್ಷ ಜನರಿಗೆಕೋವಿಡ್ ಲಸಿಕಾಕರಣದ ಗುರಿ ಇದ್ದು, ಇದರಲ್ಲಿ ಈಗಾಗಲೇ 16,61,047 ಫಲಾನುಭವಿಗಳಿಗೆಮೊದಲನೇ ಡೋಸ್ ಲಸಿಕೆಯನ್ನು ತೆಗೆದುಕೊಂಡಿದ್ದು, 13,36,713 ಫಲಾನುಭವಿಗಳು ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 29,97,760 ಫಲಾನುಭವಿಗಳಿಗೆ ಲಸಿಕಾಕರಣ ಮಾಡಲಾಗಿದೆ ಎಂದು ಹೇಳಿದರು.

ಕೋವಿಸೀಲ್ಡ್‌ ಲಸಿಕೆಯನ್ನು ತೆಗೆದುಕೊಂಡ ಫಲಾನುಭವಿಗಳು 84 ದಿನ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯನ್ನು ತೆಗೆದುಕೊಂಡ ಫಲಾನುಭವಿಗಳು 28 ದಿನಗಳ ನಂತರ ಕಡ್ಡಾಯವಾಗಿ ಎರಡನೇ ಡೋಸನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಫಲಾನುಭವಿಗಳು ಹೆಸರು ನೋಂದಣಿಯನ್ನು ಖಚಿತ ಪಡೆಸಿಕೊಂಡು, ತಕ್ಷಣ ಲಸಿಕೆಯನ್ನು ಪಡೆಯಬೇಕು. ಲಸಿಕೆಯಿಂದ ಯಾರು ಕೂಡವಂಚಿತರಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT