ದೇವರಹಿಪ್ಪರಗಿ: ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ತಾಯಿ ಹೆಸರಿನಲ್ಲಿ ಇಲ್ಲಿನ ತಾ.ಪಂ ಆವರಣದಲ್ಲಿ ಒಂದು ವೃಕ್ಷ ಅಭಿಯಾನ ಗುರುವಾರ ಜರುಗಿತು.
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಂ.ವೈ.ಮಲಕ್ಕನ್ನವರ ಮಾತನಾಡಿ, ‘ಪ್ರಧಾನಿ ಆಶಯದಂತೆ ಪ್ರತಿಯೊಬ್ಬರೂ ತಾಯಿ ಹೆಸರಿನಲ್ಲಿ ಒಂದು ಸಸಿ ನೆಟ್ಟು, ಅದನ್ನು ಪೋಷಿಸಬೇಕು. ಜಿಲ್ಲೆಯಾದ್ಯಂತ ಅರಣ್ಯ ಸಂರಕ್ಷಣೆ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಹಾಗೂ ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದು ತಿಳಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.
ಉಪವಲಯ ಅರಣ್ಯ ಅಧಿಕಾರಿ ಆರ್.ಎಚ್. ಬಿರಾದಾರ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಜಿ.ಎಸ್. ರೋಡಗಿ, ಕಿರಣ ಪಾಟೀಲ, ಆನಂದ ಮುದೋಡಗಿ, ಪರಶುರಾಮ ಗುಬ್ಬೇವಾಡ, ಭೀಮರಾಯ ಭಾವಿಕಟ್ಟಿ, ಭಾರತಿ ಕೋಳಿ, ಭಾರತಿ ಸೇರಿದಂತೆ ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.