ಗ್ಯಾರಂಟಿ ಯೋಜನೆಗಳಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಸರ್ಕಾರ ಇದೀಗ ಕಂದಾಯ ಗ್ರಾಮಗಳಲ್ಲಿರುವ ನಿವಾಸಿಗಳಿಗೆ ಡಿಜಿಟಲ್ ಹಕ್ಕುಪತ್ರ ಕೊಡುವ ಕಾರ್ಯಕ್ಕೆ ಮುಂದಾಗಿರುವುದು ತಾಂಡಾದ ನಿವಾಸಿಗಳಿಗೆ ನೆಮ್ಮದಿ ಭಾವ ತರಿಸಿದೆ
ಸಂತೋಷ ಚವ್ಹಾಣ(ಹುಲ್ಲೂರ) ಬಂಜಾರ ಸಮಾಜದ ಮುಖಂಡ
ದಿನಕ್ಕೆ ನೂರು ಗುರಿ ನೀಡಿದ್ದು ನಮ್ಮಲ್ಲಿ ಈಗಾಗಲೇ 800ಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ನೋಂದಾಯಿಸಿದ್ದೇವೆ. ಕಂದಾಯ ಇಲಾಖೆಯ ಅಧಿಕಾರಿಗಳು ನೀಡುವ ಹಕ್ಕುಪತ್ರಗಳನ್ನು ನೋಂದಾಯಿಸುವ ಕೆಲಸ ಪ್ರಗತಿಯಲ್ಲಿದೆ
ಸಚಿನ್ ಖೈನೂರ ಉಪನೋಂದಣಾಧಿಕಾರಿ
ಮುದ್ದೇಬಿಹಾಳ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿ 1200ಕ್ಕೂ ಹೆಚ್ಚು ನಿವಾಸಿಗರಿಗೆ ಡಿಜಿಟಲ್ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದ್ದು ಈಗಾಗಲೇ ಶೇ 80 ರಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿದೆ