ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾನಕ್ಕೂ ಸೀಮಂತ ಭಾಗ್ಯ!

Last Updated 4 ಸೆಪ್ಟೆಂಬರ್ 2020, 14:14 IST
ಅಕ್ಷರ ಗಾತ್ರ

ವಿಜಯಪುರ: ಗರ್ಭಿಣಿಯರಿಗೆ ಸೀಮಂತ(ಕುಪ್ಪಸ) ಮಾಡುವ ಸಂಪ್ರದಾಯ ಸಾಮಾನ್ಯ. ಆದರೇ, ವಿಜಯಪುರ ನಗರದ ನಿವಾಸಿಪ್ರಕಾಶ ಕುಂಬಾರ ಅವರು ತಮ್ಮ ಮನೆ ಸಾಕು ನಾಯಿ ‘ಸೋನಮ್ಮ‘ ಚೊಚ್ಚಲ ಗರ್ಭಿಣಿಯಾಗಿರುವುದಕ್ಕೆ ಸೀಮಂತ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಕಾಶ ಕುಂಬಾರ ಅವರ ಮನೆಯಲ್ಲಿ ಸಾಕಿರುವ ಪಮೋರಿಯನ್ ತಳಿಯ ಶ್ವಾನವೂ ಗರ್ಭಿಣಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮರಿ ಹಾಕಲಿದೆ. ಅದರ ಪ್ರೀತಿಗೆ ಮತ್ತು ಸ್ವಭಾವಕ್ಕೆ ಮಾರುಹೋದ ಕುಂಬಾರ ಕುಟುಂಬವು ಪ್ರೀತಿಯಿಂದ ಸೀಮಂತ ಕಾರ್ಯ ಶುಕ್ರವಾರ ಮಾಡಿದ್ದಾರೆ.

ಸಂಪ್ರದಾಯದಂತೆ ಕುಟುಂಬದವರು ಸೀರೆ, ಕುಪ್ಪಸ, ಬಂಗಾರ, ಬೆಳ್ಳಿ, ದಂಡಿ, ಹಾರ, ಹಣ್ಣು ಹಂಪಲು ಇತ್ಯಾದಿ ಮಂಗಲ ದ್ರವ್ಯಗಳನ್ನು ಸೋನಮ್ಮಳಿಗೆ (ಶ್ವಾನ) ಅರ್ಪಿಸಿದರು.

ಈ ಸಂದರ್ಭದಲ್ಲಿ ಮುತ್ತೈಂದೆಯರು ಶ್ವಾನಕ್ಕೆ ಆರತಿ ಬೆಳಗಿದರು. ಮಹಾದೇವಿ ವಿ.ಕುಂಬಾರ ಸೀಮಂತದ ಪದಗಳನ್ನು ಹಾಡಿದರು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಸೀಮಂತ ಕಾರ್ಯದಲ್ಲಿ ಶ್ವಾನ ಸುಮ್ಮನೆ ಕುಳಿತುಕೊಳ್ಳುವ ಮೂಲಕ ಗಮನಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT