ವಿಜಯಪುರ: ನಗರದಲ್ಲಿ ಬೆಳಿಗ್ಗೆ 8.18ರಿಂದ 8.20ರ ವೇಳೆಯಲ್ಲಿ ಭೂಮಿ ಕಂಪಿಸಿದ ಅನುಭವ ಹಾಗೂ ಭೂಮಿ ಒಳಗಿನಿಂದ ಭಾರೀ ಶಬ್ಧ ಕೇಳಿಬಂದಿದೆ.

ಒಂದು ವಾರದ ಹಿಂದೆ ಇದೇ ದಿನ (ಸೆಪ್ಟೆಂಬರ್ 5, ಶನಿವಾರ) ರಾತ್ರಿ 11.47ರಿಂದ 11.49ರ ನಡುವೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿತ್ತು. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿತ್ತು.

ಅಂದು ರಾತ್ರಿಯಾಗಿದ್ದರಿಂದ ಜನರಿಗೆ ಹೆಚ್ಚಿನ ಅನುಭವವಾಗಿತ್ತು. ಆದರೆ, ಇಂದು ಹಗಲು ಆಗಿರುವುದರಿಂದ ಬಾಹ್ಯ ಶಬ್ದಗಳಿಂದಾಗಿ ಜನರಿಗೆ ಭೂಕಂಪನದ ಅನುಭವ ಅಲ್ಪಮಟ್ಟಿಗೆ ಆಗಿದೆ.

ಇದನ್ನೂ ಓದಿ:ವಿಜಯಪುರ: ರಿಕ್ಟರ್ ಮಾಪಕದಲ್ಲಿ 3.9 ಭೂಕಂಪನ ತೀವ್ರತೆ ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.