ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯ ಹಲವೆಡೆ ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನರು

Last Updated 4 ಸೆಪ್ಟೆಂಬರ್ 2021, 19:12 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಶನಿವಾರ ರಾತ್ರಿ 11.47 ಮತ್ತು 11.48ಕ್ಕೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.

ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೊನಿ, ಗಣೇಶ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಜಿಲ್ಲೆಯ ಹಲವೆಡೆ ಎರಡು ಬಾರಿ ದೊಡ್ಡದಾಗಿ ಶಬ್ಧವಾಗಿದೆ. ಜೊತೆಗೆ ಭೂಮಿಯೂ ಕಂಪಿಸಿದೆ.

ಭಯ, ಭೀತರಾದ ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಧ್ಯಾಹ್ನದಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನರ ಆತಂಕ ಹೆಚ್ಚಿಸಿದೆ.

ಜಿಲ್ಲೆಯ ತಿಕೋಟಾ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಮನಗೂಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಈ ಕುರಿತು ಈಗಾಗಲೇ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಭೂಮಿ ಒಳಗೆ ಕಲ್ಲಿನ ಪದರಗಳು ಸರಿದಾಗ ಈ ರೀತಿ ಭೂಕಂಪನ ಮತ್ತು ಶಬ್ಧದ ಅನುಭವವಾಗುತ್ತದೆ. ಇದು ಭೂಕಂಪನವಲ್ಲ ಎಂದು ಈಗಾಗಲೇ ವರದಿ ನೀಡಿದ್ದಾರೆ.

ವಿಜಯಪುರದ ಹಲವೆಡೆ ಶನಿವಾರ ತಡ ರಾತ್ರಿ ಭೂಕಂಪನದ ಅನುಭವವಾಗಿದ್ದು, ಜನ ಮನೆ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ.
ವಿಜಯಪುರದ ಹಲವೆಡೆ ಶನಿವಾರ ತಡ ರಾತ್ರಿ ಭೂಕಂಪನದ ಅನುಭವವಾಗಿದ್ದು, ಜನ ಮನೆ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT