ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಉಲ್‌ ಫಿತ್ರ್‌ : ಮಾರುಕಟ್ಟೆಯಲ್ಲಿ ಜನಜಂಗುಳಿ

Last Updated 1 ಮೇ 2022, 15:08 IST
ಅಕ್ಷರ ಗಾತ್ರ

ವಿಜಯಪುರ: ರಂಜಾನ್‌ ಮಾಸದ ಒಂದು ತಿಂಗಳ ರೋಜಾ ಸೋಮವಾರ ಕೊನೆಗೊಳ್ಳಲಿದ್ದು, ಚಂದ್ರದರ್ಶನದ ಬಳಿಕ ಮಂಗಳವಾರ ಆಚರಿಸಲಿರುವ ‘ಈದ್‌ ಉಲ್‌ ಫಿತ್ರ್‌’ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ, ವಹಿವಾಟು ಭಾನುವಾರ ನಡೆಯಿತು.

ನಗರದ ಕೆ.ಸಿ.ಮಾರುಕಟ್ಟೆ, ಎಲ್‌ಬಿಎಸ್‌ ಮಾರುಕಟ್ಟೆ, ಗಾಂಧಿ ಚೌಕಿ ಸೇರಿದಂತೆಪ್ರಮುಖ ಅಂಗಡಿ, ಮಳಿಗೆಗಳಿಗೆಮುಸ್ಲಿಮರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿಬಟ್ಟೆ, ಮದರಂಗಿ, ಬಳೆ, ಚಪ್ಪಲಿ, ಬ್ಯಾಗ್‌, ಸ್ಟೇಷನರಿ, ಸಾಂಬಾರ್‌ ಪದಾರ್ಥ, ಟೋಪಿ, ಸುಗಂಧ ದ್ರವ್ಯ, ಕರ್ಜೂರ, ಒಣ ದ್ರಾಕ್ಷಿ, ಉತ್ತತ್ತಿ, ಸೇಬು, ಕಲ್ಲಂಗಡಿ, ಬಾಳೆ ಹಣ್ಣು ಸೇರಿದಂತೆ ವಿವಿಧ ಹಣ್ಣು–ಹಂಪಲು, ಸಿಹಿ ಪದಾರ್ಥಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು. ಮಾರುಕಟ್ಟೆಯಲ್ಲಿ ಕುರಿ, ಆಡು, ಹೋತಗಳ ಖರೀದಿಯೂ ಜೋರಾಗಿದೆ.

ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಕಳೆಗುಂದಿದ್ದ ಈದ್‌ ಉಲ್‌ ಫಿತ್ರ್‌ ಅನ್ನು ಈ ಬಾರಿ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲು ಮುಸ್ಲಿಮರು ಸಜ್ಜಾಗಿದ್ದಾರೆ. ಆದರೆ,ಮಾರುಕಟ್ಟೆಯಲ್ಲಿ ಪ್ರತಿ ವರ್ಷಗಳ ದರವೂ ಗಗನಕೇರಿತ್ತು.

ಧಾತ್ರಿ ಮಸೀದಿ, ಬುಕಾರಿ ಮಸೀದಿ, ಜಾಮೀಯಾ ಮಸೀದಿ, ಈದ್ಗಾ, ಇಬ್ರಾಹಿಂ ರೋಜಾ ಮಸೀದಿ, ಖಾಲಿ ಮಸೀದಿ, ಬಾರಾಟಾಂಗ್‌ ಮಸೀದಿ, ಖಾಜಾ ಅಮಿನ್‌ ದರ್ಗಾ ಮಸೀದಿ, ಹಾಸಿಂಪೀರ ದರ್ಗಾ ಮಸೀದಿ ಸೇರಿದಂತೆನಗರದ ಪ್ರಮುಖ ಮಸೀದಿ, ದರ್ಗಾಗಳನ್ನು ರಂಜಾನ್‌ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಗಳಿಂದ ಆಲಂಕರಿಸಲಾಗಿದ್ದು, ಹಬ್ಬದ ವಾತಾವರಣ ಎಲ್ಲೆಡೆ ಮನೆ ಮಾಡಿದೆ.

ದೂರದ ನಗರ, ಪಟ್ಟಣಗಳಿಗೆ ಕೆಲಸದ ನಿಮಿತ್ತ ತೆರಳಿರುವವರು ಹಬ್ಬದ ನಿಮಿತ್ತ ತಮ್ಮ ಮನೆಗಳಿಗೆ ಮರಳಿದ್ದು, ಬಂಧು–ಬಾಂಧವರು ಒಂದೆಡೆ ಸೇರಿರುವುದಿಂದ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.

ಬಿಸಿಲ ಝಳ ಅಧಿಕವಾಗಿರುವುದರಿಂದ ಬೆಳಿಗ್ಗೆ 11ರಿಂದ ಸಂಜೆ 4 ರವರೆಗೆ ಮಾರುಕಟ್ಟೆ ಭಣಗುಡುತ್ತಿತ್ತು. ಬೆಳಿಗ್ಗೆ ಮತ್ತು ಸಂಜೆ ಹಾಗೂ ರಾತ್ರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು. ಸೋಮವಾರವೂ ರಂಜಾನ್‌ ಹಬ್ಬದ ಖರೀದಿ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ಶೀರ್‌ ಕುರ್ಮಾ ಸಿಹಿ ತಯಾರಿಕೆಗೆ ಅಗತ್ಯವಿರುವ ಹಾಲಿನ ಖರೀದಿ ಜೋರಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT