ತಾಳಿಕೋಟೆ: ಪಟ್ಟಣದಲ್ಲಿ ದಿ ರಾಯಲ್ ಸ್ಪೋರ್ಟ್ಸ್ ಅಸೋಸಿಯೇಷನ್, ಯುವಜನ ಸೇವಾ ಕ್ರೀಡಾ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳಿನಿಂದ ಅಂಜುಮನ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಆರ್.ಪಿ.ಎಲ್. ಸೀಸನ್-1 ಕ್ರಿಕೆಟ್ ಸರಣಿ ಭಾನುವಾರ ತೆರೆ ಕಂಡಿತು.

ಅಂತಿಮ ಪಂದ್ಯದಲ್ಲಿ ಫಾರೂಕ್ ಸಿಸಿ ತಂಡವು ಅರಾಫಾ ಸಿಸಿ ತಂಡವನ್ನು 28 ರನ್‌ಗಳಿಂದ ಸೋಲಿಸುವ ಮೂಲಕ ₹1 ಲಕ್ಷ ನಗದು ಬಹುಮಾನ ಹಾಗೂ ಪಾರಿತೋಷಕ ಗಳಿಸಿತು.

ದ್ವಿತೀಯ ಸ್ಥಾನ ಪಡೆದ ಅರಾಫಾ ಸಿಸಿ ₹60ಸಾವಿರ ನಗದು ಹಾಗೂ ಪಾರಿತೋಷಕ ಪಡೆಯಿತು. ಆಲ್ ರೌಂಡರ್ ಆಟವಾಡಿದ ಶಿವು ಹೊಸಮನಿ ಅಸ್ಕಿ 17 ಎಸೆತಗಳಲ್ಲಿ 23 ರನ್ ಹಾಗೂ ಮೂರು ವಿಕೆಟ್ ಕಬಳಿಸಿ ಪಂದ್ರಶ್ರೇಷ್ಠರಾದರು. ಅಗ್ರಸ್ಥಾನದಲ್ಲಿದ್ದ ಲೆವೆಂಡರ್ ಮೂರನೆಯ ಸ್ಥಾನ ಗಳಿಸಿ ₹40ಸಾವಿರ ನಗದು ಹಾಗೂ ಪಾರಿತೋಷಕ ಪಡೆಯಿತು. ಬಿ.ಎಂ ಆ್ಯಂಡ್ ಎಸ್.ಆರ್ಮಿ ನಾಲ್ಕನೇ ಸ್ಥಾನದೊಂದಿಗೆ ₹30 ಸಾವಿರ, ಪಾರಿತೋಷಕ ಪಡೆಯಿತು.

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಗ್ಲೋಬಲ್ ಸ್ಕೂಲ್ ಹಾಗೂ ಡೆವೆಲಪರ್ಸ್‌ನ ಅಧ್ಯಕ್ಷ ಡಾ.ವೀರಭದ್ರೇಗೌಡ ಹೊಸಮನಿ, ‘ಪಟ್ಟಣದಲ್ಲಿ ಕ್ರೀಡೆಗಳ ಉತ್ತೇಜನಕ್ಕೆ ಇಂತಹ ಕ್ರೀಡೆಗಳು ಮಾದರಿಯಾಗಿವೆ. ಎಲ್ಲ ಬಗೆಯ ಕ್ರೀಡೆಗಳಿಗೂ ಅವಕಾಶ ದೊರೆಯಲಿ. ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲಿ’ ಎಂದರು.

ಶಿಕ್ಷಕ ಎಸ್.ಎಸ್. ಗಡೇದ ಮಾತನಾಡಿದರು.

ಅಬ್ದುಲ್ ರಜಾಕ್ ಮನಗೂಳಿ, ಪುರಸಭೆ ಸದಸ್ಯರಾದ ಜೈಸಿಂಗ ಮೂಲಿಮನಿ, ಮುಸ್ತಫಾ ಚೌದ್ರಿ, ಮಂಜೂರ ಅಲಿ ಬೇಫಾರಿ, ಅಬ್ದುಲ್ ಸತ್ತಾರ ಅವಟಿ, ಮಹಿಬೂಬ್ ಕೆಂಭಾವಿ, ಶ್ರಿನಿವಾಸ ಸೋನಾರ, ರಾಜಶೇಖರ ಸಜ್ಜನ, ಅನಿಲ ಇರಾಜ, ಶಬ್ಬೀರ್ ಅಹಮ್ಮದ್ ಲಾಹೋರಿ, ಸುದೀಪ ಚಲವಾದಿ, ಶಬ್ಬೀರ್ ನಮಾಜಕಟ್ಟಿ, ವಿಜು ನಾಡಕರ್ಣಿ, ರಫೀಕ್ ಸೋಲಾಫುರೆ, ಮೈಬೂಬ್ ಲಾಹೋರಿ, ರಫೀಕ್ ಬೇಫಾರಿ, ಅಯುಬ್ ಮನಗೂಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.