ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಗಾಣದ ಎಣ್ಣೆ ಉತ್ಪಾದಿಸುವ ಘಟಕಕ್ಕೆ ಚಾಲನೆ 15 ರಂದು

Published 12 ಮೇ 2024, 14:51 IST
Last Updated 12 ಮೇ 2024, 14:51 IST
ಅಕ್ಷರ ಗಾತ್ರ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕಂಬಾಗಿಯಲ್ಲಿ ನೈಸರ್ಗಿಕ ಕಟ್ಟಿಗೆ ಗಾಣದಿಂದ ತಯಾರಿಸುವ ಘಟಕ ಮತ್ತು ಮಳಿಗೆಯನ್ನು ಮೇ 15ರಂದು ಸಂಜೆ 4ಕ್ಕೆ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಮರೇಗುದ್ದಿ ನಿರುಪಾಧೀಶ ಸ್ವಾಮೀಜಿ, ಶಿರೋಳ ಶಂಕರಾರೂಢ ಸ್ವಾಮೀಜಿ, ಮಮದಾಪುರ ಅಭನವ ಮುರುಘೇಂದ್ರ ಸ್ವಾಮೀಜಿ, ಗುಣದಾಳ ವಿವೇಕಾನಂದ ದೇವರು, ನಾವದಗಿ ಶ್ರೀಶೈಲ ಸ್ವಾಮೀಜಿ, ಕಂಬಾಗಿ ಚನ್ನಬಸಯ್ಯ ಹಿರೇಮಠ ಸಾನ್ನಿಧ್ಯ ವಹಿಸಲಿದ್ದಾರೆ.

ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ನಂದಿ ಕಾರ್ಖಾನೆ ಅಧ್ಯಕ್ಷ ಆನಂದಕುಮಾರ ದೇಸಾಯಿ, ಡಾ.ಮಹಾಂತೇಶ ಬಿರಾದಾರ ಬರಲಿದ್ದಾರೆ.

ಮಧುರಾ ಆಯಿಲ್ ಇಂಡಸ್ಟ್ರೀಸ್ ಮೂಲಕ ಸಾಂಪ್ರದಾಯಿಕ ಮರದ ಗಾಣದಿಂದ ತಯಾರಿಸುವ ಶುದ್ಧ ಆರೋಗ್ಯಕರ ಕೊಬ್ಬರಿ, ಶೇಂಗಾ ಮತ್ತು ಕುಸುಬೆ ಅಡುಗೆ ಎಣ್ಣೆ ಉತ್ಪಾದಿಸುತ್ತಿದ್ದೇವೆ ಎಂದು ಉಮೇಶ ಮಲ್ಲಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT