ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯ ನಿಂಬೆಗೆ ಉತ್ತಮ ಬೇಡಿಕೆ: ಶಾಸಕ ಯಶವಂತರಾಯಗೌಡ ಪಾಟೀಲ

Published 9 ಜುಲೈ 2024, 15:34 IST
Last Updated 9 ಜುಲೈ 2024, 15:34 IST
ಅಕ್ಷರ ಗಾತ್ರ

ಇಂಡಿ: ಇಂಡಿಯ ನಿಂಬೆಗೆ ಭೌಗೋಳಿಕ ಸೂಚ್ಯಾಂಕ ದೊರೆತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡಿಯ ನಿಂಬೆಗೆ ಉತ್ತಮ ಬೇಡಿಕೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಎಸ್.ಡಬ್ಲೂ.ಎ.ಆರ್.ಡಿ ಎಸ್ ಸಂಸ್ಥೆ ಸಹಯೋಗದೊಂದಿಗೆ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿ ನಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೋಲ್ಡ ಸ್ಟೋರೆಜ್ - ಇಂಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ಎಕರೆ, ಇಲ್ಲವೇ ನಿಂಬೆ ಅಭಿವೃದ್ದಿ ಮಂಡಳಿಗೆ ಸರ್ಕಾರ ಜಾಗ ನೀಡಿದ್ದು, ಅಲ್ಲಿ ಮೂರು ಎಕರೆ, ಇಲ್ಲವೇ ಬೂದಿಹಾಳ ಗ್ರಾಮದ ಹತ್ತಿರ ಔದ್ಯೋಗಿಕ ವಸಹಾತು ನಿರ್ಮಿಸುತ್ತಿದ್ದು ಅಲ್ಲಿ ಮೂರು ಎಕರೆ ಯಾವುದಾದರೂ ಒಂದು ಕಡೆ ಜಾಗ ನೀಡಿ ಶೀಘ್ರದಲ್ಲಿಯೇ ಕೋಲ್ಡ್ ಸ್ಟೋರೆಜ್ ನಿರ್ಮಿಸಲಾಗುವದು ಎಂದರು.

ಈಗಾಗಲೇ ನಿಂಬೆ ಅಭಿವೃದ್ದಿಗೆ ಸರ್ಕಾರ ₹7.5 ಕೋಟಿ ಹಣ ನೀಡಿದ್ದು, ಅದು ಕೋಲ್ಡ್‌ ಸ್ಟೋರೆಜ್ ನಿರ್ಮಿಸಲು ಉಪಯೋಗಿಸಬಹುದು ಎಂದರು.

ನಿಂಬೆ ಖರೀದಿಗೆ ನಾಲ್ಕು ಇಲ್ಲವೆ ಐದು ಕಡೆ ದಲ್ಲಾಳಿಗಳು ಮಾರುಕಟ್ಟೆ ಮಾಡಿದ್ದು, ಅದರ ಬದಲಾಗಿ ಸರ್ಕಾರದಿಂದಲೇ ಒಂದು ಮಾರುಕಟ್ಟೆ ನಿರ್ಮಿಸಿ ತಾಲ್ಲೂಕಿನ ಎಲ್ಲ ನಿಂಬೆ ಅಲ್ಲಿಯೇ ಖರಿದಿಸುವ ಮತ್ತು ದಲ್ಲಾಳಿಗಳು ಅಲ್ಲಿ ಬರುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ರೈತರು ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ಮತ್ತು ಅಲ್ಲಿಯ ವಿಜ್ಞಾನಿಗಳ ಸಲಹೆ ಪಡೆದುಕೊಳ್ಳಬೇಕು. ನಿಸರ್ಗ, ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಕೃಷಿ ಹೊಂಡ ಇಂಡಿ ತಾಲ್ಲೂಕಿನಲ್ಲಿವೆ.  ಶೀಘ್ರದಲ್ಲಿ ಇಂಡಿ ತಾಲ್ಲೂಕಿನಲ್ಲಿ ಕೃಷ್ಣಾ ಕಾಲುವೆಯಿಂದ ಮತ್ತು ರೇವಣಸಿದ್ದೇಶ್ವರ, ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆಯಿಂದ ನೀರು ಹರಿದು ಬರುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ರೈತರು ಹೆಚ್ಚು ನಿಂಬೆ ಬೆಳೆಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು.

ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಮಾತನಾಡಿ, ದೇಶದ 737 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಇಂಡಿಯ ಕೃಷಿ ವಿಜ್ಞಾನ ಕೇಂದ್ರ ಪ್ರಥಮ ಸ್ಥಾನದಲ್ಲಿದೆ. ರೈತರು ನಿಂಬೆ ಸೇರಿದಂತೆ ಬಹು ಬೆಳೆ ಪದ್ಧತಿ ಅನುಸರಿಸಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಮೇಲಿಂದ ಮೇಲೆ ಬಂದು ಸಲಹೆ ಪಡೆಯಬೇಕು ಎಂದರು.

ನಿಂಬೆ ರೋಗಕ್ಕೆ ಅಂಟುರೋಗ ಬರದೇ ಇರುವ ಹಾಗೆ ಕ್ರಮ ಕೈಕೊಳ್ಳಲು ವಿವರಿಸಿದರು. ಸಾವಯುವ ಗೊಬ್ಬರ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಯೋಜನೆ ಅಳವಡಿಸಲು ತಿಳಿಸಿದರು.

ನಿಂಬೆ ಅಭಿವೃದ್ದಿ ಮಂಡಳಿ ಮ್ಯಾನೆಜಿಂಗ್ ಡೈರೆಕ್ಟರ್ ರಾಹುಲ್ ಕುಮಾರ ಭಾವಿದೊಡ್ಡಿ, ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಮಹಾದೇವಪ್ಪ ಏವೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಎಸ್.ಪಾಟೀಲ, ತೋಟಗಾರಿಕೆ ವಿಜ್ಞಾನಿ ಡಾ. ಹೀನಾ, ಬಾಲಾಜಿ ನಾಯಕ, ಪ್ರಗತಿಪರ ರೈತರಾದ ತಮ್ಮಣ್ಣ ಪೂಜಾರಿ, ಭೀಮಾಶಂಕರ ಮುರಗುಂಡಿ ಮಾತನಾಡಿದರು.

ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ಇಒ ಬಾಬು ರಾಠೋಡ, ಮಲ್ಲನಗೌಡ ಪಾಟೀಲ ಇದ್ದರು.

ಪ್ರಗತಿಪರ ರೈತರಾದ ಸೋಮಣ್ಣ ಶರಣಪ್ಪ ಕರೂರ, ಭೀಮರಾಯ ಶಂಕರೆಪ್ಪ ಹಿರಾಪುರ, ಪ್ರಕಾಶ ಸಿದರಾಯ ಗಿಣ್ಣಿ, ರಾಮಣ್ಣ ಧರಗೊಂಡ ದೇವರ ನಾವದಗಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT