ಪಂಢರಪುರ | ದರ್ಶನ ಮಂಟಪ, ಟೋಕನ್ ವ್ಯವಸ್ಥೆ ಜಾರಿ: ಮುಖ್ಯಮಂತ್ರಿ ಏಕನಾಥ ಶಿಂಧೆ
ಅಲ್ಲಮಪ್ರಭು ಕರ್ಜಗಿ/ ರಮೇಶ ನಾಯಿಕ
Published : 18 ಜುಲೈ 2024, 5:26 IST
Last Updated : 18 ಜುಲೈ 2024, 5:26 IST
ಫಾಲೋ ಮಾಡಿ
Comments
ಪಂಢರಪುರದಲ್ಲಿ ಆಷಾಢ ಏಕದಶಿಯ ದಿನವಾದ ಬುಧವಾರ ನಡೆದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ದೇವರಿಗೆ ನಮಸ್ಕರಿಸಿರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಪಂಢರಪುರದಲ್ಲಿ ಆಷಾಢ ಏಕದಶಿಯ ದಿನವಾದ ಬುಧವಾರ ನಡೆದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಠ್ಠಲ ನಿರ್ಮಲ ದಿಂಡಿ ಪುರಸ್ಕಾರ
ವಿಠ್ಠಲ ರುಕ್ಮಿಣಿ ವತಿಯಿಂದ ನೀಡುವ ವಿಠಲ ದಿಂಡಿ ಪುರಸ್ಕಾರ ಪ್ರಥಮ ಬಹುಮಾನ ₹1 ಲಕ್ಷ ಸಂತ ತುಕಾರಾಂ ಮಹಾರಾಜ ವಂಶಜ ದೇಹುಕರ ದಿಂಡಿ ಸಂತ ತುಕಾರಾಂ ಮಹಾರಾಜ ಪಲ್ಲಕಿ ಉತ್ಸವಕ್ಕೆ ಲಭಿಸಿದೆ. ದ್ವಿತೀಯ ಬಹುಮಾನ ₹ 75 ಸಾವಿರ ಪುಣೆಯ ದಾನೆವಾಲಾ ನಿಕಂ ದಿಂಡಿ ಸಂತ ಜ್ಞಾನೇಶ್ವರ ಮಹಾರಾಜ ಪಲ್ಲಕ್ಕಿ ಉತ್ಸವಕ್ಕೆ ಲಭಿಸಿದೆ. ತೃತೀಯ ಬಹುಮಾನವಾಗಿ ಇಂದಾಪೂರದ ಗುರು ಬಾಬಾಸಾಹೇಬ ಆಜರೇಕರ ದಿಂಡಿ ಸಂತ ಜ್ಞಾನೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಲಭಿಸಿದೆ. ವಿಠ್ಠಲ ರುಕ್ಮಿಣಿ ಮಂದಿರ ಸಮಿತಿ ವತಿಯಿಂದ ಪ್ರತಿ ವರ್ಷ ಪ್ರಕಾಶನಗೊಳ್ಳುವ ಆರೋಗ್ಯದೂತ ಪುಸ್ತಕವನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಮಂದಿರಕ್ಕೆ ₹2.45 ಕೋಟಿ ಮೌಲ್ಯದ ಬೆಳ್ಳಿಯನ್ನು ದಾನವಾಗಿ ನೀಡಿದ ಉದ್ಯಮಿ ಸುನಿಲ್ ಮೊರ್ಗೆಗೆ ಮುಖ್ಯಮಂತ್ರಿಗಳು ಸನ್ಮಾನಿಸಿದರು.
ಮಾನಕರಿ ಭಕ್ತರಿಗೆ ಸನ್ಮಾನ
ನಾಸಿಕ್ ಜಿಲ್ಲೆಯ ರೈತ ಶಂಕರ ಆಹಿರೆ ದಂಪತಿಗಳಿಗೆ ಎಂ ಎಸ್ ಆರ್ ಟಿ ಸಿ ವತಿಯಿಂದ ನೀಡುವ ಒಂದು ವರ್ಷದ ಉಚಿತ ಬಸ್ ಪಾಸ್ ಅನ್ನು ನೀಡಿ ಮುಖ್ಯಮಂತ್ರಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಈ ದಂಪತಿಗಳು ಕಳೆದ 16 ವರ್ಷಗಳಿಂದ ಆಷಾಢ ಏಕಾದಶಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.