ಇಂಡಿ ಪಟ್ಟಣದ ಮಿನಿ ವಿಧಾನ ಸೌಧದ ಕಂಪೌಂಡ ಗೋಡೆಗೆ ಅಂಟಿಕೊಂಡಿರುವ ಇಂಡಿ-ಸಾಲೋಟಗಿ ಗಾಡಿ ರಸ್ತೆ ಕಲ್ಲು ಮುಳ್ಳು ಕಂಟಿಗಳಿಂದ ಆಕ್ರಮಿಸಿಕೊಂಡು ಗಟಾರದ ನೀರು ಮುಂದೆ ಸಾಗಲು ಬಿಡದೇ ಗಬ್ಬು ವಾಸನೆ ಹರಡಿರುವದು.
ಒತ್ತುವರಿ ರಸ್ತೆ ವೀಕ್ಷಣೆ ಮಾಡಿದ್ದೇನೆ. ಪುರಸಭೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ರಸ್ತೆ ಅಭಿವೃದ್ದಿಗೆ ಅಗತ್ಯ ಕ್ರಮ ಜರುಗಿಸುತ್ತೇನೆ. –
ಅನುರಾಧಾ ವಸ್ತ್ರದ ಉಪ ಕಂದಾಯ ವಿಭಾಗಾಧಿಕಾರಿ ಇಂಡಿ
ಸಾಲೋಟಗಿ ಗ್ರಾಮಕ್ಕೆ ಹೋಗುವ ಗಾಡಿ ರಸ್ತೆ ಬಂದಾಗಿದೆ. ಅಲ್ಲಿರುವ ಗಟಾರದ ನೀರು ನಿಂತು ಗಬ್ಬು ವಾಸನೆ ಹರಡಿದೆ. ಇದರಿಂದ ಸೊಳ್ಳೆಗಳ ಕಾಟವಾಗಿದ್ದು ಮನೆಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲ
ಟಿ.ಎಚ್.ಬಿರಾದಾರ ವಕೀಲ
ತೆರವು ಮಾಡಿಸಿದ ಇಂಡಿ-ಸಾಲೋಟಗಿ ಗಾಡಿ ರಸ್ತೆ ಕೆಲಸ ಪುರಸಭೆಯವರು ಪ್ರಾರಂಭಿಸಲು ಅಡತಡೆ ಬಂದರೆ ಪೊಲೀಸ್ ಇಲಾಖೆ ಸಹಕಾರ ಪಡೆಯುತ್ತೇವೆ
–ಬಿ.ಎಸ್.ಕಡಕಬಾವಿ ತಹಶೀಲ್ದಾರ್ ಇಂಡಿ
ರಸ್ತೆ ಆಕ್ರಮಿಸಿಕೊಂಡವರು ಕೋರ್ಟ್‌ಗೆ ಹೋಗಿ ತಡೆ ತಂದಿದ್ದಾರೆ. ಆದರೆ ಪುರಸಭೆಯ ಅಧಿಕಾರಿಗಳು ಸರಿಯಾಗಿ ಕೋರ್ಟ್‌ಗೆ ಮಾಹಿತಿ ನೀಡದೇ ವಿಳಂಬ ಮಾಡುತ್ತಿದ್ದಾರೆ. ಕಾರಣ ರಸ್ತೆ ಅಭಿವೃದ್ಧಿ ಕೆಲಸ ನಿಂತಿದೆ.