ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮಾವಾಸ್ಯೆ ಅಶುಭ ಎಂಬುದು ಸುಳ್ಳು’: ಎಂ.ಸಿ.ಮನಗೂಳಿ

ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿಕೆ
Last Updated 7 ಡಿಸೆಂಬರ್ 2018, 13:59 IST
ಅಕ್ಷರ ಗಾತ್ರ

ವಿಜಯಪುರ:‘ಅಮಾವಾಸ್ಯೆ ಅಶುಭ ಎಂಬುದು ಸುಳ್ಳು. ಅಮಾವಾಸ್ಯೆ ದಿನ ಚಲೋ ಕೆಲಸ ಮಾಡಿದರೆ ಒಳ್ಳೆಯದಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ತಿಳಿಸಿದರು.

ಇಲ್ಲಿನ ಜಲನಗರದಲ್ಲಿರುವ ಮಹಾನಗರ ಪಾಲಿಕೆಯ ಆವರಣದಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ ಸಚಿವರು, ಹಿಂದಿನ ಸರ್ಕಾರದ ಅತ್ಯುತ್ತಮ ಯೋಜನೆಯನ್ನು ನಮ್ಮ ಸರ್ಕಾರವು ಮುಂದುವರೆಸಿಕೊಂಡು ಹೋಗಲಿದೆ ಎಂದು ಹೇಳಿದರು.

‘ಯಾವುದೋ ಜ್ಯೋತಿಷಿ ಮಾತು ಕೇಳಿಕೊಂಡು, ರೇವಣ್ಣ ಹೇಳಿದರೆಂದು ಈ ಕ್ಯಾಂಟೀನ್‌ ಉದ್ಘಾಟಿಸುತ್ತಿಲ್ಲ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬುದಷ್ಟೇ ನಮ್ಮ ಆಶಯ. ಅಷ್ಟಕ್ಕೂ ಈ ಅಮಾವಾಸ್ಯೆ ಗಂಡು ಅಮಾವಾಸ್ಯೆ’ ಎಂದು ಮನಗೂಳಿ ಕ್ಯಾಂಟೀನ್ ಉದ್ಘಾಟನೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ಬಜೆಟ್‌ನ ₹ 35,000 ಕೋಟಿ ದುರುಪಯೋಗವಾಗಿದೆ ಎಂಬುದು ಪತ್ರಿಕೆಗಳಲ್ಲಿ ಬಂದಿರುವ ದೂರಷ್ಟೇ. ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಚವ್ಹಾಣ, ಮೇಯರ್ ಶ್ರೀದೇವಿ ಲೋಗಾಂವಿ, ಉಪ ಮೇಯರ್‌ ಗೋಪಾಲ ಘಟಕಾಂಬಳೆ, ಸದಸ್ಯರಾದ ಅಬ್ದುಲ್‌ ರಜಾಕ್‌ ಹೊರ್ತಿ, ಪ್ರೇಮಾನಂದ ಬಿರಾದಾರ, ರವೀಂದ್ರ ಲೋಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಆಯುಕ್ತ ಡಾ.ಔದ್ರಾಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT