ಶನಿವಾರ, ಅಕ್ಟೋಬರ್ 1, 2022
23 °C

ಸಮ್ಮೇಳನದ ಮಾದರಿ ಲೋಗೊ ರಚನೆಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನವೆಂಬರ್‌ನಲ್ಲಿ ನಗರದಲ್ಲಿ ನಡೆಯಲಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಸಮ್ಮೇಳನದ ಲೋಗೊ ರಚಿಸಿ, ಕಳುಹಿಸಲು ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಜಯಪುರ ಜಿಲ್ಲೆಯ ಐತಿಹಾಸಿಕವಾಗಿದ್ದು, ಶರಣರು, ಸೂಫಿಸಂತರು ನೆಲವೀಡು. ಆಲಮಟ್ಟಿ ಜಲಾಶಯವೂ ಜಿಲ್ಲೆಯ ಒಡಲಲ್ಲಿದೆ. ಶರಣರ ನಾಡು, ದ್ರಾಕ್ಷಿಯ ಬೀಡು ಆಗಿದೆ. ಸೈಕ್ಲಿಂಗ್ ಕಣಜವೂ ಆಗಿದೆ. ಮಾತ್ರವಲ್ಲ. ಹೆಸರಾಂತ ಪತ್ರಕರ್ತರ ಜಿಲ್ಲೆಯೂ ಆಗಿದೆ. ಹಾಗಾಗಿ ಲೋಗೊದಲ್ಲಿ ಜಿಲ್ಲೆಯ ಸಮಗ್ರತೆ ಬಿಂಬಿಸುವ ಲೋಗೊಗಳನ್ನು ಜಿಲ್ಲೆಯ ಕಲಾವಿದರು ರಚಿಸಿ ಕಳುಹಿಸಿ ಕೊಡಬಹುದಾಗಿದೆ.

ಆಗಸ್ಟ್‌ 20 ಕೊನೆ ದಿನ. ಕಲಾವಿದರು ರಚಿಸಿದ ಮಾದರಿ ಲೋಗೊ ಹಾಗೂ ಅದರ ಕೆಳಗೆ ವಿವರ ನೀಡಿದ್ದನ್ನು ವಾಟ್ಸ್‌ ಆ್ಯಪ್‌ ನಂ : 9448889777 ಹಾಗೂ 9448210277 ಗೆ ಕಳುಹಿಸಬಹುದಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು