ಶನಿವಾರ, ಡಿಸೆಂಬರ್ 3, 2022
26 °C

ವಿಜಯಪುರ | ಹೆಲ್ಮೆಟ್ ಕಡ್ಡಾಯ ಧರಿಸಲು ಸಲಹೆ: ಎನ್.ಬಿ.ಮೆಳ್ಳಗಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಬೇಕು. ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಹಾನಿಯನ್ನು ತಪ್ಪಿಸಲು ಹೆಲ್ಮೆಟ್ ಸಹಾಯಕವಾಗುವುದರಿಂದ ಹೆಲ್ಮೆಟ್ ಧರಿಸುವ ಮೂಲಕ ಅಮೂಲ್ಯವಾದ ಜೀವನ ರಕ್ಷಣೆ ಮುಂದಾಗಬೇಕು ಎಂದು ಇಂಡಿಯಾ ರಿಸರ್ವ್ ಬಟಾಲಿಯನ್ ಕಮಾಂಡೆಂಟ್ ಎನ್.ಬಿ.ಮೆಳ್ಳಗಟ್ಟಿ ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಇಂಡಿಯಾ ರಿಸರ್ವ್ ಬಟಾಲಿಯನ್ ಕಮಾಂಡೆಂಟ್  ಆಶ್ರಯದಲ್ಲಿ ಹಮ್ಮಿಕೊಂಡ  ವಾಯು ಮಾಲಿನ್ಯ ನಿಯಂತ್ರಣ ಮಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಜಿ.ಆರ್.ಮಂಜುನಾಥ್ ಮಾತನಾಡಿ, ವಾಹನಗಳ ಅತಿ ಹೆಚ್ಚಿನ ಓಡಾಟದಿಂದ ವಾಯು ಮಾಲಿನ್ಯ ವಿಪರೀತವಾಗಿದ್ದು, ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು. ವಾಯು ಮಾಲಿನ್ಯ ನಿಯಂತ್ರಣವನ್ನು ಹತೊಟಿಯಲ್ಲಿಡಲು ಎಲ್ಲ ವಾಹನಗಳಿಗೆ ವಾಯು ಮಾಲಿನ್ಯ ಪ್ರಮಾಣ ಪತ್ರ ಪಡೆಯಬೇಕು ಎಂದರು.

ವಾಹನಗಳು ಚಲಿಸುವಾಗ ರಸ್ತೆ ಬದಿಯಲ್ಲಿ ಚಿಹ್ನೆಗಳ ಕುರಿತು ಸಾರ್ವಜನಿಕರಲ್ಲಿಯೂ ಜಾಗೃತಿ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಪ್ರಸನ್ನ ಕುಮಾರ, ನಂದಕುಮಾರ ಎಸ್, ಸಿಂಗದ, ಶರಣಬಸವ, ಸಹಾಯಕ ಕಮಾಂಡೆಂಟ್ ಶರಣಬಸವ, ಎನ್.ಪಿ.ಯಡಾಲ್, ಸಿ.ಲಕ್ಷ್ಮಣ, ಆರ್.ಪಿ.ಐ ವಿಜಯ ಕಟ್ಟಣ್ಣವರ, ಮಹಾವೀರ ಹಳಿಂಗಳಿ, ಹುಸೇನ ಲಾಲಕೋಟೆ, ಪ್ರಕಾಶ ಹುಳಬತ್ತಿ, ಡಿ.ಬಿ.ನಾಗರಾಜ, ವಿಜಯಕುಮಾರ ರೂಡಗಿ ಸೇರಿದಂತೆ ಇತರೆ ನೌಕರರು, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು