ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆಯಲ್ಲಿ ಡಿ.17ರಂದು ಸಂಜೆ 4 ಗಂಟೆಗೆ ತೊರವಿ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತೊರವಿ ಗ್ರಾಮ, ತೊರವಿ ತಾಂಡಾ ನಂ. 1,2,3,4, ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇನಾ ನಗರ, ಸೈನಿಕ ನಗರ, ಎನ್‌ಜಿಒ ಕಾಲೊನಿ, ಕಂದಾಯ ಕಾಲೊನಿ, ವಿಜಯ ಕಾಲೊನಿ, ಏಕಾಂತ ನಗರ, ದೇಸಾಯಿ ಕಾಲೊನಿ, ಹವಾಲ್ದಾರ್ ಕಾಲೊನಿ, ನಾಗರಬಾವಿ ಕಾಲೊನಿ, ಸಬ್ ರಿಜಿಸ್ಟ್ರಾರ್ ಕಾಲೊನಿ, ಟೀಚರ್ಸ್ ಕಾಲೊನಿ, ಕಾಬಾಡೆ ಕಾಲೊನಿ, ಅಂಬೇಡ್ಕರ್ ಕಾಲೊನಿ, ಪೊಲೀಸ್ ಕಾಲೊನಿ, ಸೈನಿಕ ಶಾಲೆ ಕಾಲೊನಿ, ಶಾಂತಿ ನಗರ, ಕುರುವಿನ ಶೆಟ್ಟಿ ಕಾಲೊನಿ, ಸಿದ್ಧಾರ್ಥ ಕಾಲೊನಿಯ ಸಾರ್ವಜನಿಕರು ಪಾಲ್ಗೊಳ್ಳಬಹುದು.

ವಿಧವಾ ವೇತನ, ವೃದ್ಧಾಪ್ಯ ವೇತನ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ, ಅಂಕವಿಕಲ ಕಲ್ಯಾಣ ಕಾರ್ಯಕ್ರಮಗಳು, ಆಶ್ರಯ ಮನೆಗಳು, ಪಡಿತರ ಚೀಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು, ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ, ಇತರ ನಿಗಮಗಳ ಸಹಾಯ ಧನ ಮತ್ತು ಪ್ರೋತ್ಸಾಹ ಧನದ ಮಾಹಿತಿಗಳನ್ನು ಈ ಸಭೆಯಲ್ಲಿ ಪಡೆಯಬಹುದು.

ಸಾರ್ವಜನಿಕರು ಆಧಾರ್ ಕಾರ್ಡ್, ವೋಟರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳೊಂದಿಗೆ ಹಾಜರಾಗಬೇಕು. ಹಿಂದೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರ/ಪಿಂಚಣಿ ಪತ್ರಗಳನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಶಾಸಕರ ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.