ಶನಿವಾರ, ಫೆಬ್ರವರಿ 4, 2023
18 °C

ಜುಡೋ: ವಿಜಯಪುರಕ್ಕೆ ಮೂರು ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಮಿನಿ ಓಲಂಪಿಕ್‌ ಜುಡೋ ಕ್ರೀಡೆಯಲ್ಲಿ ವಿಜಯಪುರದ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾಗವಹಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಶ್ರಾವಂತಿ ಶಿಂಗೆ ಚಿನ್ನದ ಪದಕ ಪಡೆದರು. ವಿಶೇಷವಾಗಿ ಆದಿವಾಸಿ ಅಲೆಮಾರಿ ಬುಡಕಟ್ಟು ಹರಣಶಿಕಾರಿ ಸಮುದಾಯದ ತನುಶ್ರೀ ಕಾಳೆ ಕಂಚಿನ ಪದಕ, ಸುಭಾಶ್‌ ದೊಡಮನಿ ಕಂಚಿನ ಪದಕ, ಅರ್ಚನಾ ಕಾಳೆ ನಾಲ್ಕನೇ ಸ್ಥಾನ ಪಡೆದರು.

ವಿದ್ಯಾರ್ಥಿಗಳಿಗೆ ಶಂಕರ ಎಸ್.ಎಸ್. ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ರಾಜ್ಯ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ವಾಸುದೇವ ಕಾಳೆ ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು