ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಗಳಿಗೆ ಚಾಂಪಿಯನ್‌ ಪಟ್ಟ

ರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ
Last Updated 30 ನವೆಂಬರ್ 2022, 14:36 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ ಜಿಲ್ಲಾ ಅಸೋಸಿಯೇಷನ್ ತಂಡ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡಗಳು ನಗರದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಫೈನಲ್ ಗೆದ್ದು, ಚಾಂಪಿಯನ್ ಪಟ್ಟ ಮೂಡಿಗೆರೆಸಿಕೊಂಡವು.

ಕರ್ನಾಟಕ ತಂಡ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 12 ಓವರ್‌ಗಳಲ್ಲಿ 6 ಹುದ್ದರಿ ನಷ್ಟಕ್ಕೆ 127 ರನ್ ಕಲೆ ಹಾಕಿತು. ತಂಡದ ನಾಯಕ್ ಜಯರಾಮ ಜಾಧವ್ 60 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ತಂಡದ ಸಹ ಆಟಗಾರ ಸಂಜಯ್ ಪಾಟೀಲ್ ಅವರು ಅಮೋಘ 7 ಸಿಕ್ಸರ್, 3 ಬೌಂಡರಿಗಳಿಂದ 66 ರನ್ ಗಳಿಸಿದರು.

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡವು ಮಧ್ಯಪ್ರದೇಶ ತಂಡವನ್ನು ಮಣಿಸಿ ಕಪ್ ತನ್ನ ಮುಡಿಗೆರಿಸಿಕೊಂಡಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟೆನ್ನಿಸ್ ಬಾಲ್ ಕ್ರಿಕೆಟ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷರ ಡಾ. ಬಾಬು ರಾಜೇಂದ್ರ ನಾಯಕ್, ನಮ್ಮ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಸೂಕ್ತ ಪ್ರತಿಭೆ ತೋರಿಸಲಿ ಎಂಬ ಉದ್ದೇಶದಿಂದ ರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಹಮ್ಮಿಕೊಂಡು ಯಶಸ್ವಿ ಆಗಿದ್ದೇವೆ ಎಂದರು.

ಈ ಟೂರ್ನಿಯಲ್ಲಿ ದೇಶದ ನಾನಾ ರಾಜ್ಯಗಳಿಂದ ಪುರುಷರ 16 ತಂಡಗಳು ಹಾಗೂ ಮಹಿಳೆಯರ 4 ತಂಡಗಳು ಭಾಗವಹಿಸಿ, ತಮ್ಮ ಪ್ರತಿಭೆ ತೋರಿದ್ದು ನಿಜಕ್ಕೂ ಅದ್ಭುತ. ಇದರಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಜಿಲ್ಲೆಯ ಪುರುಷ ಹಾಗೂ ಮಹಿಳಾ ತಂಡಗಳು ಉಪಂತ್ಯದಲ್ಲಿ ಗೆದ್ದಿರುವುದು ಹೆಮ್ಮೆಯ ಸಂಗತಿ. ಇದರಲ್ಲಿ ನೂರಾರು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಲಭಿಸಿ ತಮ್ಮ ಉತ್ತಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು ಎಂದರು.

ಡಾ.ರಾಜಕುಮಾರ್ ಮಾಲಿ ಪಾಟೀಲ, ರಾಜ್ಯ ಅಧ್ಯಕ್ಷೆ ಶಾಹಿದ್ ಬೇಗಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಆಬಿದ ಹಕೀಂ, ರಾಷ್ಟ್ರ ಮಟ್ಟದ ಕಾರ್ಯದರ್ಶಿ ಸುಭಾಶ್‌ ಚಂದ್ರ ವಶಿಷ್ಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಕಲಾದಗಿ, ಉಪಾಧ್ಯಕ್ಷ ಬಸನಗೌಡ ಹರನಾಳ, ರಾಜೇಶ್ವರಿ ಜುಗತಿ, ಡಾ. ಬಾಬು ಲಮಾಣಿ, ಎನ್‌ ಎಂ. ಹುಟಗಿ, ಗಣೇಶ ಕಬಾಡೆ, ಡಾ.ಅಶೋಕ ಕುಮಾರ ಜಾಧವ , ಸುರೇಶ ಬಿಜಾಪುರ, ಸಿ ಎಲ್.ರಾಠೋಡ, ಎಂ ಬಿ.ರಜಪೂತ, ಆರಿಫ್ ಇನಾಂದಾರ್, ಸತೀಶ್ ರಾಠೋಡ, ನಜೀರ್ ಕೊಳ್ಯಲ, ಆಬ್ಬಾಸಲಿ ತಡಲಗಿ, ಅಪ್ಪು ರಾಠೋಡ, ಬಸವರಾಜ್, ಶಶಿಕಲಾ ಇಜೇರಿ, ವಿದ್ಯಾ ಕೊಟೆಣ್ಣವರ, ಜಯಶ್ರೀ ಲದ್ವಾ, ಜ್ಯೋತಿ ರಾಠೋಡ, ಶೋಭಾ ವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT