ಆಲಮೇಲ: ಸರ್ಕಾರದ ಮಹತ್ವದ ಯೋಜನೆಗಳಾದ ಪಂಚ ಗ್ಯಾರಂಟಿಗಳು ದುರ್ಬಲರನ್ನು ಆರ್ಥಿಕ ಸಬಲರನ್ನಾಗಿ ಮಾಡುತ್ತಿವೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಆಲಮೇಲ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಕೊಳಾರಿ ಹೇಳಿದರು.

ಪಟ್ಟಣದ ಯುಕೆಪಿ ಕಾಲೊನಿಯಲ್ಲಿನ ಯೋಜನೆ ಅನುಷ್ಠಾನ ಸಮಿತಿಯ ಕಾರ್ಯಾಲಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ.ಅಗ್ನಿ ಮಾತನಾಡಿ, ‘ಅನುಷ್ಠಾನದ ಐದು ಇಲಾಖೆಗಳು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ’ ಎಂದರು.

‘ಫಲಾನುಭವಿಗಳ ಯಶಸ್ವಿ ಕತೆಗಳಿದ್ದರೆ ಮಾಹಿತಿ ಸಂಗ್ರಹಿಸಿ’ ಎಂದೂ ತಿಳಿಸಿದರು.

ಉದ್ಯೋಗ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮಹೇಶ ಮಾಳವಾಡೇಕರ ಮಾತನಾಡಿ, ‘ಈವರೆಗೆ ತಾಲ್ಲೂಕಿನಲ್ಲಿ 527 ನೋಂದಾಯಿತ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚು ನೋಂದಣಿ ಮಾಡಲು ಎಲ್ಲರ ಸಹಭಾಗಿತ್ವ ಅಗತ್ಯ’ ಎಂದರು.

ಆಹಾರ ಇಲಾಖೆಯ ರಮೇಶ ತಳವಾರ, ಸಾರಿಗೆ ಇಲಾಖೆಯ ಕೆ.ಎಸ್. ಬಿರಾದಾರ, ಹೆಸ್ಕಾಂ ಸೆಕ್ಷನ್ ಅಧಿಕಾರಿ ಚಂದ್ರಕಾಂತ ನಾಯಕ, ತಮ್ಮ ಇಲಾಖೆಗಳ ಮೇ ತಿಂಗಳವರೆಗಿನ ಮಾಹಿತಿಯನ್ನು ನೀಡಿದರು.

‘ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ವಿತರಣೆ ಆಗುತ್ತಿಲ್ಲ, ಪಡಿತರ ಅಂಗಡಿಗಳ ಮುಂದೆ ಕಡ್ಡಾಯವಾಗಿ ತಿಂಗಳ ನೀಡುವ ಆಹಾರ ಧಾನ್ಯಗಳ ಫಲಕ ಎದ್ದು ಕಾಣುವಂತೆ ಹಾಕಬೇಕು’ ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದರು.

ಅನುಷ್ಠಾನ ಸಮಿತಿಯ ಸದಸ್ಯರಾದ ವಾಹಬ್ ಸುಂಬಡ, ಪ್ರಶಾಂತ ನಾಶಿ, ಮಲ್ಲು ಪ್ಯಾಟಿ, ಬಸವರಾಜ ನಂದೂರ, ರವೀಂದ್ರ ಹೊಳ್ಳಿ ಇದ್ದರು.

Quote - ಗೃಹಲಕ್ಷ್ಮಿ ಯೋಜನೆ ಶೇ 98ರಷ್ಟು ಗುರಿ ಸಾಧಿಸಲಾಗಿದೆ. ನೋಂದಾಯಿಸಿದ ಇನ್ನೂ ಶೇ2 ರಷ್ಟು ಕಾರ್ಯವು ಪ್ರಗತಿಯಲ್ಲಿದೆ ಜಯಶ್ರೀ ದೊಡಮನಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.