ಗುರುವಾರ , ಜನವರಿ 21, 2021
16 °C

ಕುರುಬ ಸಮುದಾಯ ಎಸ್.ಟಿಗೆ ಸೇರ್ಪಡೆಗೆ ಆಗ್ರಹಿಸಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಕುರುಬ ಸಮುದಾಯವನ್ನು ಎಸ್.ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ನ29 ರಂದು ಬಾಗಲಕೋಟೆ ನಗರದಲ್ಲಿ ವಿಭಾಗಮಟ್ಟದ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸಮುದಾಯದ ಒಂದು ಲಕ್ಷ ಮಂದಿ ಸಮಾವೇಶಗೊಳ್ಳಲಿದ್ದಾರೆ ಎಂದು ಕುರುಬರ ಎಸ್.ಟಿ ಹೋರಾಟ ಸಮಿತಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಸ್.ಟಿ ಮೀಸಲಾತಿ ಸಿಗಬೇಕು ಎಂಬುದು ಕಟ್ಟಕಡೆಯ ಕುರುಬನ ಕೂಗಾಗಿದೆ. ಬಹಳ ವರ್ಷಗಳಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದೆ. ಈಗಾಗಲೇ ಕುರುಬ ಸಮುದಾಯದ ಗೊಂಡಾ ಗಳಿಗೆ ಎಸ್.ಟಿ ಜಾತಿ ಪ್ರಮಾಣಪತ್ರ ಕೇವಲ ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಗೊಂಡಾ ಮತ್ತು ಕುರುಬ ಎರಡೂ ಒಂದೇ ಬೇರೆ ಅಲ್ಲ ಎಂದು ಕುರುಬ ಸಮುದಾಯದ ರಾಜ್ಯ ಪ್ರಮುಖ ಶ್ರೀಶೈಲ ಕವಲಗಿ ವಿಶ್ಲೇಷಿಸಿದರು.

ಮೀಸಲಾತಿ ದೊರಕಿಸಿಕೊಳ್ಳುವ ಹಿನ್ನೆಲೆಯಲ್ಲಿ ವಿವಿಧ ರೀತಿಯಲ್ಲಿ ಹೋರಾಟ ರೂಪಿಸಲಾಗುವುದು. ಜನವರಿ 15 ರಿಂದ ಕಾಗಿನೆಲೆ ಸುಕ್ಷೇತ್ರದಿಂದ 15 ದಿನಗಳ ಕಾಲ ಬೆಂಗಳೂರಿಗೆ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಈ ಹೋರಾಟ ಪಕ್ಷಬೇಧ ಮರೆತು ನಡೆಸುತ್ತಿರುವ ಕುರುಬ ಸಮುದಾಯ ಅತ್ಯಂತ ಪ್ರಮುಖ ಹೋರಾಟವಾಗಿದೆ. ಎಲ್ಲ ಕುರುಬ ಸಮುದಾಯದ ಜನರು ಒಗ್ಗಟ್ಟಿನಿಂದ ಹೋರಾಟದಲ್ಲಿ ಮುನ್ನುಗ್ಗಬೇಕು ಎಂದು ಸಿದ್ದು ಬುಳ್ಳಾ, ಪ್ರಕಾಶ ಹಿರೇಕುರುಬರ, ರವಿ ನಾಯ್ಕೋಡಿ, ದತ್ತಾತ್ರೇಯ ಯಡಗಿ, ಸಿದ್ದು ಕೆರಿಗೊಂಡ, ಬನ್ನೆಪ್ಪ ಜೋಗಿ ಮನವಿ ಮಾಡಿಕೊಂಡರು.

ಶಿವಾನಂದ ಗಣಿಹಾರ, ಸುದರ್ಶನ ಜಂಗಣ್ಣಿ, ಜಿ.ಎಸ್.ಹೊಸಗೌಡರ, ಶ್ರೀಶೈಲ ಕುದರಗೊಂಡ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು