ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಜಪಾನಿ ಭಾಷಾ ಅಧ್ಯಯನ ಕೇಂದ್ರ ಆರಂಭ

ಜಪಾನ್‌ ರಾಯಭಾರ ಕಚೇರಿ ಡೆಪ್ಯೂಟಿ ಕೌನ್ಸಿಲ್ ಕಸ್ತುಮಸಾ ಮರಾವೂ
Last Updated 23 ಆಗಸ್ಟ್ 2021, 15:20 IST
ಅಕ್ಷರ ಗಾತ್ರ

ವಿಜಯಪುರ:ಜಪಾನ್‌ ಮತ್ತು ಭಾರತದ ನಡುವೆ ಸಂಹವನಕ್ಕೆ ಭಾಷೆ ಕ್ಲಿಷ್ಟವಾಗಿದ್ದು, ಇದನ್ನು ದೂರ ಮಾಡಲು ಭಾರತದಲ್ಲಿ ಜಪಾನಿ ಭಾಷಾ ಅಧ್ಯಯನ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಇದೆಜಪಾನ್‌ ರಾಯಭಾರ ಕಚೇರಿ ಡೆಪ್ಯೂಟಿ ಕೌನ್ಸಿಲ್ ಕಸ್ತುಮಸಾ ಮರಾವೂ ಹೇಳಿದರು.

ಬಿ.ಎಲ್.ಡಿ.ಇ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಲಾಸ್ ರೂಂ ಕಾಂಪ್ಲೆಕ್ಸ್ ಉದ್ಘಾಟಿಸಿದ ಬಳಿಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಭಾರತದಿಂದ ಬಳುವಳಿಯಾಗಿ ಬಂದ ಬೌದ್ಧ ಧರ್ಮದ ಅನುಯಾಯಿಗಳಾದ ನಾವು ಹಲವು ರೀತಿಗಳಲ್ಲಿ ಭಾರತದೊಂದಿಗೆ ಸಾಮ್ಯತೆ ಹೊಂದಿದ್ದೇವೆಎಂದರು.

ಬೌದ್ಧ ಧರ್ಮದ ಆಗಮನದಿಂದ ಜಪಾನಿಯರೂ ದೇವ, ದೇವತೆಗಳನ್ನು ಪೂಜಿಸುತ್ತೇವೆ. ನೂರಕ್ಕೂ ಹೆಚ್ಚು ದೇವರನ್ನು ನಮ್ಮ ದೇಶದಲ್ಲಿ ಆರಾಧಿಸುತ್ತಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಏಳು ದೇವರನ್ನು ನಾವು ಆರಾಧಿಸುತ್ತೇವೆ. ಅದರಲ್ಲಿ ಒಂದು ದೇವರು ಮಾತ್ರ ಜಪಾನ್ ದೇಶದ್ದಾಗಿದ್ದು, ಉಳಿದಂತೆ ಶಿವ, ಕುಬೇರ, ಸರಸ್ವತಿ ಮತ್ತಿತರ ಆರು ದೇವರನ್ನು ನಾವು ಪೂಜಿಸುತ್ತೇವೆ’ ಎಂದರು.

ಅಭಿವೃದ್ಧಿ ಸಾಧ್ಯ:

ಜಪಾನ್‌ -ಭಾರತ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಹೇಗೆ ಮುಂದಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ. ಜಪಾನ್‌ ಕೌಶಲಯುತ ಉತ್ಪಾದನೆಗೆ ಹೆಸರುವಾಸಿ. ಇವುಗಳ ಆಧಾರದ ಮೇಲೆ ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದರು.

ಜಪಾನಿಗರ ದೀರ್ಘಾಯುಷ್ಯದ ಗುಟ್ಟು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತಮ ಆಹಾರ, ಉತ್ತಮ ವಿಹಾರ ದೀರ್ಘಾಯುಷ್ಯದ ಗುಟ್ಟು ಎಂದು ತಿಳಿಸಿದರು.

ಬಿ.ಎಲ್.ಡಿ.ಇ ಅಧ್ಯಕ್ಷರಾದ ಶಾಸಕ ಎಂ.ಬಿ.ಪಾಟೀಲ್ ಮಾತನಾಡಿ, ವಿಜಯಪುರ ಸೇರಿದಂತೆ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇವೆ. ಉತ್ಕೃಷ್ಟ ತೋಟಗಾರಿಕೆ ಉತ್ಪನ್ನಗಳು ವಿಜಯಪುರದಲ್ಲಿ ಇವೆ. ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ತೋಟಗಾರಿಕಾ ಬೆಳೆಗಳ ಮಾರುಕಟ್ಟೆಗೆ ಜಪಾನ್‌ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ವಿನಂತಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಇಂದು ಅತ್ಯಧಿಕ ನೀರು, ವಿದ್ಯುತ್ ಉತ್ಪಾದನೆ ಮತ್ತು ಕಚ್ಚಾ ಭೂಮಿ ಇದೆ. ಜಪಾನ್‌ ದೇಶದ ಟೊಯೊಟೊದಂತಹ ಬೃಹತ್ ಉದ್ಯಮಗಳನ್ನು ವಿಜಯಪುರಕ್ಕೆ ತೆಗೆದುಕೊಂಡು ಬನ್ನಿ. ಇಲ್ಲಿನ ಸೌಕರ್ಯಗಳನ್ನು ಬಳಸಿಕೊಳ್ಳಿ. ನಮ್ಮ ಜನರಿಗೂ ಉದ್ಯೋಗ ನೀಡಿರಿ ಎಂದು ಹೇಳಿದರು.

ಬಿ.ಎಲ್.ಡಿ.ಇ ನಿರ್ದೇಶಕ ಬಸನಗೌಡ ಎಂ.ಪಾಟೀಲ್, ಪ್ರಾಚಾರ್ಯ ಡಾ.ಅತುಲ್ ಆಯಿರೆ, ಪ್ರೊ.ಅನುರಾಧ ಟಂಕಸಾಲಿ, ಪ್ರೊ.ರಾಘವೇಂದ್ರ ಕುಲಕರ್ಣಿ, ದೇವೆಂದ್ರ ಅಗರವಾಲ, ಡಾ.ಮಹಾಂತೇಶ ಬಿರಾದಾರ, ಡಾ.ವಿ.ಪಿ.ಹುಗ್ಗಿ, ಪ್ರೊ.ಶೋಲ್ಮೊನ್ ಚೋಪಡೆ, ಡಾ.ಆರ್.ಬಿ.ಕೊಟ್ನಾಳ, ಡಾ.ಪ್ರಕಾಶ ಸಿದ್ದಾಪುರ ಉಪಸ್ಥಿತರಿದ್ದರು.

***

ಅಧ್ಯಾತ್ಮ, ಕಲೆ, ಆಹಾರ, ಸಂಸ್ಕೃತಿ ಸೇರಿದಂತೆ ಭಾರತ ಮತ್ತು ಜಪಾನ್‌ ಹಲವು ವಿಷಯಗಳಲ್ಲಿ ಸಾಮ್ಯತೆ ಹೊಂದಿದೆ

ಕಸ್ತುಮಸಾ ಮರಾವೂ

ಜಪಾನ್‌ ರಾಯಭಾರ ಕಚೇರಿ ಡೆಪ್ಯೂಟಿ ಕೌನ್ಸಿಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT