ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: ಬರದಿಂದ ಒಣಗಿದ ಲಿಂಬೆ ಗಿಡಗಳು

ತಾಲ್ಲೂಕಿನಲ್ಲಿ 3560 ಹೆಕ್ಟೆರ್‌ ಲಿಂಬೆ ತೋಟಕ್ಕೆ ಹಾನಿ
Published 20 ಮೇ 2024, 4:35 IST
Last Updated 20 ಮೇ 2024, 4:35 IST
ಅಕ್ಷರ ಗಾತ್ರ

ಇಂಡಿ: ಮಳೆ ಅಭಾವ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ಇಂಡಿ ತಾಲ್ಲೂಕೊಂದರಲ್ಲೇ ಸುಮಾರು 3,560 ಹೆಕ್ಟೇರ್ ಲಿಂಬೆ ತೋಟ ಬರಕ್ಕೆ ತುತ್ತಾಗಿದೆ.

2022-2023ನೇ ಸಾಲಿನಲ್ಲಿ ಇಂಡಿ ತಾಲ್ಲೂಕಿನಲ್ಲಿ 4350.12 ಹೆಕ್ಟೇರ್ ಪ್ರದೇಶದಲ್ಲಿ ಇದ್ದ ಬೆಳೆ 2023 ರಿಂದ 2024 ಮೇ ವರೆಗೆ ನಿಸರ್ಗ ಕೊಟ್ಟ ಬರೆಯಿಂದ 3560 ಹೆಕ್ಟೇರ್ ಲಿಂಬೆ ಬೆಳೆ ಹಾನಿಯಾಗಿದೆ.

2023ನೇ ಸಾಲಿನ ಮುಂಗಾರಿ ಹಂಗಾಮಿನಲ್ಲಿ ಮಳೆಯಾಗದಿರುವುದರಿಂದ ಲಿಂಬೆ ಬೆಳೆ ಹೂ ಬಿಡಲಿಲ್ಲ. ಇದರಿಂದ ಲಿಂಬೆ ಹಾನಿಯಾದರೆ. ಮಳೆಯ ಅಭಾವ ಮತ್ತು ಕಾಲುವೆಗೆ ನೀರಿಲ್ಲದಿರುವುದರಿಂದ ತಾಲ್ಲೂಕಿನಲ್ಲಿ ಲಿಂಬೆ ಬೆಳೆ ಒಣಗಿಹೋಗಿದೆ. ಇದಕ್ಕೆ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆ ಮತ್ತು ಬಿರುಗಾಳಿಯಿಂದ ಕೆಲವು ಕಡೆ ಲಿಂಬೆ ಬೆಳೆಗಳು ಬುಡ ಸಮೇತ ಕಿತ್ತು ಬಿದ್ದಿವೆ.

ಲಿಂಬೆ ಬೆಳೆ ರೈತರಿಗೆ ನೀರಿಲ್ಲ:

ಮಳೆಯ ಅಭಾವದಿಂದ ಕಂಗೆಟ್ಟಿಟ್ಟಿರುವ ಇಂಡಿ ರೈತರು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯನ್ನು ನಂಬಿದ್ದಾರೆ. ಇಂಡಿ ಬ್ರ್ಯಾಂಚ್ ಕಾಲುವೆಗೆ ಹರಿಸುತ್ತಿರುವ ನೀರು ಕೊನೆಯ 172ನೇ ಕಿ.ಮೀ. ವರೆಗೆ ಹರಿಯುತ್ತಿಲ್ಲ. ಇನ್ನು ಗುತ್ತಿ ಬಸವಣ್ಣ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿಗಳು ಪೂರ್ಣಗೊಂಡಿಲ್ಲ. ರೇವಣಸಿದ್ದೇಶ್ವರ ಏತ ನೀರಾವರಿಗೆ ಇದೀಗ ಮಂಜೂರಾತಿ ದೊರೆತಿದ್ದು, ಅದು ಎಂದು ಮುಗಿಯುತ್ತದೆಯೋ ಗೊತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಲಿಂಬೆ ಬೆಳೆಯುವ ರೈತರಿಗೆ ನೀರಿನ ಅಭಾವ ಉಂಟಾಗಿದೆ.

ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ವಿಜಯಪುರ ಜಿಲ್ಲೆಯ 7300 ಲಿಂಬೆ ಬೆಳೆಗಾರ ಪ್ರತಿ ರೈತರಿಗೆ 2.5 ಹೆಕ್ಟೇರ್ ಪ್ರದೇಶಕ್ಕೆ ₹22,500 ಪರಿಹಾರ ಮಂಜೂರಾಗಿದ್ದು, ಈಗಾಗಲೇ ₹2 ಸಾವಿರದಂತೆ ಎಲ್ಲಾ ಲಿಂಬೆ ಬೆಳೆಗಾರ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಇನ್ನುಳಿದ ₹2500 ಅನ್ನು ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಲಿಂಬೆ ಬೆಳೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಾಡ ತಿಳಿಸಿದರು.

ಜಿಲ್ಲೆಯ ಲಿಂಬೆ ಬೆಳೆ ಉಳಿಸಲಿಕ್ಕೆ ಸರ್ಕಾರ ಲಿಂಬೆ ಬೆಳೆಗಾರ ರೈತರಿಗೆ ಕೃಷಿ ಹೊಂಡಗಳನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವೈಯಕ್ತಿಕ ಕೃಷಿ ಹೊಂಡಕ್ಕೆ ₹75 ಸಾವಿರ, ಸಮುದಾಯ ಹೊಂಡಗಳಿಗೆ ಅಳತೆಗೆ ತಕ್ಕಂತೆ ₹2 ಲಕ್ಷ ಗರಿಷ್ಠ ₹ 5 ಲಕ್ಷದ ವರೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.

ಕಳೆದ 2 ವರ್ಷದಲ್ಲಿ ಮಳೆಯ ಅಭಾವದಿಂದ ಲಿಂಬೆ ಬೆಳೆ ಅಲ್ಲದೇ ಇನ್ನಿತರ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಲಿಂಬೆ ಬೆಳೆಯ ಸರ್ವೇ ಕಾರ್ಯ ಮುಗಿದಿದೆ. ಇನ್ನುಳಿದ ತೋಟಗಾರಿಕಾ ಬೆಳೆಗಳ ಹಾನಿಯ ಬಗ್ಗೆ ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ತಿಳಿಸಿದರು.

ಇಂಡಿ ತಾಲ್ಲೂಕಿನ ನೆಹರೂ ನರಗದಲ್ಲಿ ಶಿವಲಾಲ್ ರಾಠೋಡ ಅವರ ತೋಟದಲ್ಲಿ ಇತ್ತೀಚೆಗೆ ಬೀಸಿದ ಬಿರುಗಾಳಿಗೆ ಬುಡ ಸಮೇತ ಕಿತ್ತು ಬಿದ್ದಿರುವ ಲಿಂಬೆ ಗಿಡಗಳು 
ಇಂಡಿ ತಾಲ್ಲೂಕಿನ ನೆಹರೂ ನರಗದಲ್ಲಿ ಶಿವಲಾಲ್ ರಾಠೋಡ ಅವರ ತೋಟದಲ್ಲಿ ಇತ್ತೀಚೆಗೆ ಬೀಸಿದ ಬಿರುಗಾಳಿಗೆ ಬುಡ ಸಮೇತ ಕಿತ್ತು ಬಿದ್ದಿರುವ ಲಿಂಬೆ ಗಿಡಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT