ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ| ದಾಸಿಮಯ್ಯನವರ ಆದರ್ಶ ಅರಿಯೋಣ: ನಡಹಳ್ಳಿ  

ನೇಕಾರ ಅಭಿವೃದ್ಧಿ ನಿಗಮ ಘೋಷಣೆ: ಹರ್ಷ
Last Updated 26 ಮಾರ್ಚ್ 2023, 14:13 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಕನ್ನಡನಾಡಿನ ಪ್ರಥಮ ವಚನಕಾರ ದೇವರ ದಾಸಿಮಯ್ಯನವರು ಕಾಯಕಕ್ಕೆ ಉನ್ನತವಾದ ಮೌಲ್ಯವನ್ನು ತಂದುಕೊಟ್ಟವರು. ಇವರು ಸತ್ಯ, ಶುದ್ಧ ಮನೋಭಾವನೆಯಿಂದ ಬಟ್ಟೆ ನೇಯುವ ವೃತ್ತಿಯಲ್ಲಿ ಕಾಯಕ ಯೋಗಿಗಳಾಗಿ ಜನಮನ್ನಣೆ ಪಡೆದರು ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1043ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಾಸಿಮಯ್ಯನವರ ಅಪೂರ್ವವಾದ ಶಿವಭಕ್ತಿ, ದಾಸೋಹ ಭಾವನೆ, ಕಾಯಕ ಪೂಜ್ಯತೆ, ಶಿವಯೋಗ ಸಾಧನೆ, ಸಮಾಜೋದ್ಧಾರದ ಚಿಂತನೆಗಳನ್ನು ನೇಕಾರ ಸಮಾಜದ ಎಲ್ಲರೂ ಅರಿತು ಪಾಲಿಸುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರ ನೇಕಾರರ ಏಳ್ಗೆಗೆ ಹಲವಾರು ಯೋಜನೆಗಳ ಜೊತೆಗೆ ಮುಖ್ಯವಾಗಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಶಿಕ್ಷಕ ಜಿ.ಟಿ.ಮಂಗಳೂರು, ನಾಡಿನ ಪ್ರಥಮ ವಚನಕಾರರಾಗಿ ರಾಮನಾಥ ಎಂಬ ನಾಮಾಂಕಿತದಿಂದ 176 ವಚನಗಳನ್ನು ದಾಸಿಮಯ್ಯನವರು ರಚಿಸಿದ್ದಾರೆ. ಅವರ ವಚನಗಳು ಬಹಳ ಸರಳವಾಗಿವೆ. ಉತ್ತಮ ಸಂಸ್ಕೃತಿ, ಧರ್ಮ, ಆಚಾರವನ್ನು ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಶ್ರೀಶೈಲ್ ಭಾವಿಕಟ್ಟಿ ಮಾತನಾಡಿದರು.

ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ನಡಹಳ್ಳಿ ಅವರನ್ನು ನೇಕಾರ ಸಮಾಜದಿಂದ ಸನ್ಮಾನಿಸಲಾಯಿತು.

ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಉಮೇಶ ಚಲವಾದಿ, ಶಿರಸ್ತೇದಾರ ಶಕುಂತಲಾ ಸಜ್ಜನ, ನೇಕಾರ ಸಮಾಜದ ಮುಖಂಡರಾದ ಮುತ್ತಣ್ಣ ಪ್ಯಾಟಿಗೌಡರ, ಸಿ.ಎಸ್.ಗುಡ್ಡದ, ಬಸಪ್ಪ ಹೆಬ್ಬಾಳ, ಎ.ಬಿ.ಡಂಬಳ, ಸಿದ್ಧಣ್ಣ ಚಿತ್ತರಗಿ, ಬಸವರಾಜ ಕಲ್ಲುಂಡಿ,ಲೇಶಪ್ಪ ಪ್ಯಾಟಿಗೌಡರ, ವಿಜಯಲಕ್ಷ್ಮೀ ಪ್ಯಾಟಿಗೌಡರ, ಅನುರಾಧಾ ಪ್ಯಾಟಿಗೌಡರ, ಸಂತೋಷ ಹೆಬ್ಬಾಳ, ಯುವ ಘಟಕದ ಅಧ್ಯಕ್ಷ ಶಿವು ಪ್ಯಾಟಿಗೌಡರ, ಉದಯ ಕುಪ್ಪಸ್ತ, ಶ್ರೀಶೈಲ ಮುದ್ದೇಬಿಹಾಳ, ಬಸವರಾಜ ಅಗಸಬಾಳ, ಮಲ್ಲಣ್ಣ ರಕ್ಕಸಗಿ, ನಾಗಪ್ಪ ಅಗಸಬಾಳ, ಸುರೇಶ ಆಲೂರ, ಸಂತೋಷ ಚಿತ್ತರಗಿ, ಟಿ.ಡಿ.ಲಮಾಣಿ, ಶಂಕರ ಹೆಬ್ಬಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT