ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊತ್ತಿ ಉರಿದ ಬೈಕುಗಳು: ಮೂವರು ಸಾವು 

Last Updated 3 ಅಕ್ಟೋಬರ್ 2020, 12:33 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ–ಹೂವಿನ ಹಿಪ್ಪರಗಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಎರಡು ಬೈಕುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡ ಪರಿಣಾಮ ಮೂವರು ಸಾವಿಗೀಡಾಗಿದ್ದು, ತೀವ್ರವಾಗಿ ಗಾಯಗೊಂಡ ಮತ್ತೊಬ್ಬ ವ್ಯಕ್ತಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಲ್ಲಿಅಫಜಲಪುರ ತಾಲ್ಲೂಕಿನ ಬಳರೂಗಿ ಗ್ರಾಮದ ಕುಮಾರ ಬಲಕುಂದಿ, ಜಯವಾಡಗಿ ನಿವಾಸಿ ಬಸವರಾಜ ಹಂದ್ರಾಳ(20) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಜಯವಾಡಗಿಯ ಸಾಹೇಬಗೌಡಸಿದ್ದಾಪುರದ(20) ಬಸವನ ಬಾಗೇವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಇನ್ನೊಬ್ಬ ಗಾಯಾಳು ಭೀರಪ್ಪ ಬುಯ್ಯಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಬೈಕುಗಳಿಗೆ ಬೆಂಕಿ ಹೊತ್ತು ಸುಟ್ಟುಹೋಗಿವೆ.

ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಹಾಗೂ ಬಸವನ ಬಾಗೇವಾಡಿ ಉಪವಿಭಾಗದಡಿಎಸ್‍ಪಿ ಮತ್ತು ಸಿಪಿಐ ಹಾಗೂ ಪಿಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ರಿಕೆಟ್‌ ಬೆಟ್ಟಿಂಗ್: ಐವರ ಬಂಧನ

ವಿಜಯಪುರ: ಬಸವನ ಬಾಗೇವಾಡಿ ಹಾಗೂ ನಿಡಗುಂದಿಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್ ನಡೆಸುತ್ತಿದ್ದ ಜನರ ಮೇಲೆ ದಾಳಿ ಮಾಡಿ ಐವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳ ಬಳಿ ಇದ್ದ₹ 61,500 ನಗದು ಮತ್ತು ನಾಲ್ಕು ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ.

ನಿಡಗುಂದಿ ಕೃಷ್ಣನಗರದವಿಜಯ ಚಿತ್ರದುರ್ಗ(29) ಮತ್ತುಕೆ.ಎಚ್.ಬಿ ಕಾಲೊನಿಯಮಂಜುನಾಥ ಚೌದರಿ (29),ಬಸವನ ಬಾಗೇವಾಡಿಯಸೋಮನಾಥ ಜಾಧವ(24),ಅಶೋಕ ಗಾಣಗೇರ(31), ಸಂತೋಷ ಚಿಂಚೊಳ್ಳಿ (28) ಬಂಧಿತ ಆರೋಪಿಗಳಾಗಿದ್ದಾರೆ.

ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ಮತ್ತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಮಾವಾ ಮಾರಾಟ: ಆರೋಪಿಗಳ ಬಂಧನ

ವಿಜಯಪುರ: ಚಡಚಣ ಪಟ್ಟಣದ ಆದರ್ಶನಗರ ಖುಬಾ ಮಸೀದಿ ಪಕ್ಕದಲ್ಲಿ ಹುಸೇನ್‌ ಸಾಬ್ ನದಾಫ್ ಎಂಬುವವರ ಪತ್ರಾಸ್ ಶೆಡ್‌ನಲ್ಲಿ ಅಡಿಕೆ ಚೂರು, ತೀನ್‌ಸೌ ತಂಬಾಕನ್ನು ಸುಣ್ಣದ ನೀರಿನಲ್ಲಿ ಬೆರಸಿ ನಿಷೇಧಿತ ಮಾವ ತಯಾರಿಸುತ್ತಿದ್ದ ಆರೋಪಿಗಳನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದಸಲೀಂ ನದಾಫ (27) ಮತ್ತು ಹಾವಿನಾಳದ ರಾಘವೇಂದ್ರ ಐಹೊಳೆ(22) ಅವರನ್ನು ಬಂಧಿಸಿ, 50 ಕೆ.ಜಿ.ಮಾವಾ, 120 ಕೆ.ಜಿ.ಕಚ್ಚಾ ವಸ್ತುಗಳು ಸೇರಿದಂತೆ ಒಟ್ಟು ₹13,950 ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ವಿಜಯಪುರ ಡಿ.ಸಿ.ಐ.ಬಿ ಘಟಕದ ಪೊಲೀಸ್‌ ಇನ್‌ಸ್ಪೆಕ್ಟರ್ ಸಿ. ಬಿ. ಬಾಗೇವಾಡಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT