ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಕೊಡಿಸುವ ನೆಪದಲ್ಲಿ ಮೋಸ: ಬಂಧನ

Last Updated 15 ಜೂನ್ 2021, 16:58 IST
ಅಕ್ಷರ ಗಾತ್ರ

ವಿಜಯಪುರ: ಸಿವಿಲ್‌ ಸ್ಕೋರ್‌ ಹೆಚ್ಚಿಸಿ ಸಾಲ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ದೇವರಹಿಪ್ಪರಗಿಯ ಇರ್ಫಾನ್ ತಾಂಬೋಳಿ ಎಂಬುವವರಿಂದ ₹ 8,00,864 ಹಣ ಪಡೆದು ಆನ್‌ಲೈನ್ ಮೂಲಕ ವಂಚನೆ ಮಾಡಿದ್ದ ಆರೋಪದ ಮೇರೆಗೆ ಮೂವರನ್ನು ವಿಜಯಪುರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಕ್ರೆಡಿಟ್‌ ಬಜಾರ್‌ ಫೈನಾನ್ಸಿಯಲ್‌ ಸರ್ವಿಸ್‌ ಕಂಪನಿಯ ಹೆಸರಿನಲ್ಲಿ ಮೋಸ ಮಾಡಿದ್ದ ಪ್ರಮೋದ್‌ ಕುಮಾರ್ ಸಿಂಗ್‌(37), ವಿನೋದ್‌ ಪಲ್ಲರ್‌(28) ಮತ್ತು ಗೌರವ್‌ ಸಾವಂತ್‌(29) ಬಂಧಿತ ಆರೋಪಿಗಳಾಗಿದ್ದಾರೆ.

ವಿಜಯಪುರ ಸಿ.ಇ.ಎನ್ ಅಪರಾಧ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಟೆಕ್ಟರ್ ಸುರೇಶ ಸಿ. ಬೆಂಡೆಗುಂಬಳ ನೇತೃತ್ವದ ತಂಡವು ಮಹಾರಾಷ್ಟ್ರಕ್ಕೆ ತೆರಳಿ ಠಾಣೆ ನಗರದ ಡೆಲ್ಟಾ ಗಾರ್ಡನ್ ಎದುರಿಗೆ ಇರುವ ಸಿ.ಆರ್. ಆರ್ಕೇಡ್ ಕಾಂಪ್ಲೆಕ್ಸ್‌ನಲ್ಲಿ ಇದ್ದ ಆರೋಪಿಗಳನ್ನು ಜೂನ್‌ 9ರಂದು ಬಂಧಿಸಿ ಕರೆತಂದಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮೂರು ಲ್ಯಾಪ್‌ಟಾಪ್, ಮೂರು ಮೊಬೈಲ್, ಒಂದು ಕಂಪ್ಯೂಟರ್ ಸರ್ವರ್‌, ಸಿಪಿಯು, ಡೆಸ್ಕ್‌ಟಾಪ್, ವಿವಿಧ ಬ್ಯಾಂಕುಗಳ ಡೆಬಿಟ್ ಕಾರ್ಡ್‌, 20 ಕ್ರೇಡಿಟ್ ಕಾರ್ಡ್‌ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT