ಮುದ್ದೇಬಿಹಾಳ: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ರಂಭಾಪುರಿ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ವೀರಶೈವ ಹಾಗೂ ಲಿಂಗಾಯತ ಸಮಾಜಗಳು ಬೇರೆಯಲ್ಲ, ಎರಡೂ ಒಂದೇ ಎಂದು ಪ್ರತಿಪಾದಿಸಿದ್ದಾರೆ’ ಎಂದು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.

ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಶಿಖ್ ಜನಾಂಗಕ್ಕಿಂತ ಎರಡೂವರೆ ಪಟ್ಟು ಹೆಚ್ಚು ವೀರಶೈವ– ಲಿಂಗಾಯತ ಸಮಾಜದ ಜನಸಂಖ್ಯೆ ಇದೆ. ಶತ ಶತಮಾನದಿಂದ, ಪರಿಶ್ರಮದಿಂದ ನಡೆದುಕೊಳ್ಳುವ ನ್ಯಾಯ, ನಿಷ್ಠುರ ಜನಾಂಗ ವೀರಶೈವ, ಲಿಂಗಾಯತ ಸಮುದಾಯವಾಗಿದೆ. ಆದರೆ, ರಾಜಕೀಯವಾಗಿ ಕಳೆದ 27 ವರ್ಷಗಳಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತಾ ಬರುತ್ತಿದ್ದೇವೆಯೋ ಕೇಂದ್ರದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

‘ನಮ್ಮ ಸಮುದಾಯದಿಂದ ಶೇ 90ರಷ್ಟು ಬೆಂಬಲ ಕೊಟ್ಟಿದ್ದರೂ ಸಮಾಜದ ಒಬ್ಬರೂ ಗವರ್ನರ್ ಆಗಿಲ್ಲ. ಸಮುದಾಯದಿಂದ ಆಯ್ಕೆಯಾಗಿರುವ ಸಂಸದರು ಸಮಾಜದ ಬಗ್ಗೆ ಮಾತನಾಡುತ್ತಿಲ್ಲ. ಸಮಾಜವನ್ನು ನಮ್ಮಲ್ಲಿ ನಾವು ವಿಘಟನೆ ಮಾಡಿಕೊಂಡಿದ್ದೇವೆ. ಸಂಕುಚಿತ ಮನೋಭಾವನೆಯ ತಡೆಗೋಡೆಗಳನ್ನು ತೆರವುಗೊಳಿಸುವರೆಗೂ ನಾವು ಉದ್ಧಾರವಾಗುವುದಿಲ್ಲ. ಜಾತಿ ಸೂಚಕವನ್ನು ಬಿಟ್ಟು ನಾವೆಲ್ಲ ಲಿಂಗಾಯತರು,ವೀರಶೈವರು ಎಂದು ಒಂದೇ ವೇದಿಕೆಯಲ್ಲಿ ಹೇಳಬೇಕು’ ಎಂದರು.

‘ಮನೆಯಲ್ಲಿ ಮಕ್ಕಳಿಗೆ ನಿತ್ಯವೂ ವಚನಗಳನ್ನು ಹೇಳಿಕೊಡಿ. ತಾಯಂದಿರು, ಪಾಲಕರು ಮಕ್ಕಳಿಗೆ ಒಂದು ವಚನ ಹೇಳಿಕೊಟ್ಟರೆ ಸಂಸ್ಕಾರ, ಸಂಸ್ಕೃತಿ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ನಾಗಠಾಣ, ಸಿದ್ದರಾಜ ಹೊಳಿ ಮಾತನಾಡಿದರು. ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬಾ, ಪ್ರಮುಖರಾದ ಉಮಾದೇವಿ ಬಿದರಿ, ವೆಂಕನಗೌಡ ಪಾಟೀಲ, ಬಾಪುಗೌಡ ಪಾಟೀಲ, ವಿದ್ಯಾವತಿ ತಡಸದ, ಚಂದ್ರಶೇಖರ ನಾಗರಾಳ, ಹೇಮಾ ಬಿರಾದಾರ, ರವೀಂದ್ರ ನಂದೆಪ್ಪನವರ ಇದ್ದರು.

ವಿವಿಧ ಸಮಾಜದ ಪ್ರಮುಖರಾದ ಬಸವಂತ್ರಾಯ ಗೂಳಿ, ಶರಣಪ್ಪ ಬಸರಕೋಡ, ಬಸವರಾಜ ಲಮಾಣಿ, ಬಸವರಾಜ ಹಡಪದ, ಶರಣಪ್ಪ ಚಲವಾದಿ, ಮಹೆಬೂಬ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.

ಯುವ ಘಟಕ, ಮಹಿಳಾ ಘಟಕ ಹಾಗೂ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.