ಮಂಗಳವಾರ, ಸೆಪ್ಟೆಂಬರ್ 29, 2020
22 °C
ಬಿಜೆಪಿ, ಶ್ರೀರಾಮಸೇನೆ, ಬಜರಂಗದಳ, ವಿಶ್ವಹಿಂದೂ ಪರಿಷತ್‌ನಿಂದ ವಿಶೇಷ ಪೂಜೆ

ವಿಜಯಪುರ: ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ: ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುತ್ತಿರುವಂತೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಿಂದೂ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ರಾಮ ಭಜನೆ ಮತ್ತು ರಾಮ ತಾರಕ ಮಂತ್ರದ ಪಠಣದೊಂದಿಗೆ ಶ್ರೀರಾಮ ದೇವರ ಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹಾಗೂ ಶಂಕರಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮತ್ತು ವಿವಿಧ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ವೀರಶೈವ ಮಹಾಸಭೆಯ ಪದಾಧಿಕಾರಿಗಳು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ವಿಶ್ವಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರೀರಾಮನ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಸಿಹಿಹಂಚುವ ಮೂಲಕ ಸಂಭ್ರಮಿಸಿದರು.

1992 ಡಿಸೆಂಬರ್‌ 6ರ ಕರ ಸೇವೆಯಲ್ಲಿ ಭಾಗವಹಿಸಿದ ಮಹೇಶ ಚವ್ಹಾಣ, ಬಾಬು ಶಿರಶ್ಯಾಡ ಅವರನ್ನು  ಸನ್ಮಾನಿಸಲಾಯಿತು.

ಆರ್ಶೀವಚನ ನೀಡಿದ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ, ಭಾರತ ದೇಶದ ಚೇತನಾ ಸ್ಥಳ ಆಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆದಿರುವುದು ಇಡೀ ಜಗತ್ತಿನಲ್ಲಿ  ಸುವರ್ಣಾಕ್ಷರಗಳಿಂದ ಬರೆದಿಡುವುದಾಗಿದೆ ಎಂದರು. 

ಮಾತೃಶಕ್ತಿ ಸಂಘಟನೆಯ ಪ್ರಮುಖರಾದ ಮಾಯಕ್ಕ ಚೌಧರಿ, ರಾಮ ಭಜನೆ ಮತ್ತು ರಾಮ ತಾರಕ ಮಂತ್ರ ಹೇಳಿಕೊಟ್ಟರು.

ರಾಮ ಸಮಿತಿಯ ಮಂಚಾಲೇಶ್ವರಿ, ಉತ್ತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ, ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ, ವೀರಶೈವ ಮಹಾಸಭಾದ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಪೂರ್ವ ಅಧ್ಯಕ್ಷ ಪ್ರಕಾಶ ಕಡಚೂರ, ರಾಮನವಮಿ ಉತ್ಸವ ಸಮಿತಿ ಉಮೇಶ ವಂದಾಲ, ಬಂಜರಂಗದಳದ ಈರಣ್ಣ ಹಳ್ಳಿ, ದೇವಕಾಂತ ನಾವಿ, ಶಿವುಕುಮಾರ ಕೋಟಿಮಠ, ಸಮೀರ ಚಿಪಪಕಟ್ಟಿ, ಗಣೇಶ ಜೇವೂರ, ಸಂತೋಷ ಹಿರೇಮಠ, ಬಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ರಾಘವ ಅಣ್ಣಿಗೇರಿ, ಗುರು ಗಚ್ಚಿನಮಠ, ಚಂದ್ರ ಚೌಧರಿ, ಪ್ರಕಾಶ ಚವ್ಹಾಣ, ಸ್ವದೇಶಿ ಜಾಗರಣದ ಮಂಚದ ಶಂಕರಗೌಡ ಪಾಟೀಲ, ಚಿದಾನಂದ ಔರಂಗಾಬಾದ, ಯೊಗೇಶ ಸುಲಾಖೆ ಉಪಸ್ಥಿತರಿದ್ದರು.

ಶ್ರೀರಾಮ ಸೇನೆ

ನಗರದ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ, ಶ್ರೀರಾಮ ನಾಮಜಪ ಮಾಡಿದರು. ನಂತರ ಶ್ರೀರಾಮನ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.

ಶ್ರೀರಾಮಸೇನೆ ಮುಖಂಡ ನೀಲಕಂಠ ಕಂದಗಲ್ಲ ಮಾತನಾಡಿ, ಹಿಂದೂಗಳ 500 ವರ್ಷಗಳ ಸತತ ಹೋರಾಟದ ಪ್ರತಿಫಲವಾಗಿ ಅಯೋಧ್ಯಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಹಿಂದೂಗಳ ಯುಗ ಮತ್ತೆ ಆರಂಭವಾಗಿದೆ ಎಂದರು.

ರಾಕೇಶ ಮಠ, ಅನಂದ ಕುಲಕರ್ಣಿ, ಬಸವರಾಜ ಕಲ್ಯಾಣಪ್ಪಗೊಳ, ಪ್ರವೀಣ ತಾಂಬೆ, ಅಜಿತ ವಠಾರ, ಮಹೇಶ ಕುಂಬಾರ, ರಾಜು ಜನಗೊಂಡ, ಶಿವು ಸಿರಗೂರ, ಅಶೋಕ ಹಳ್ಳೆಪ್ಪಗೊಳ, ಚೇತನ ವಾಟರಕರ, ಶಿವು ಕಂಬಾರ, ಸಂಗಮೇಶ ಉಕ್ಕಲಿ ಮತ್ತು ಶಿವಾನಂದ ಪಾಟೀಲ ಇದ್ದರು.

ಶ್ರೀರಾಮ ನಾಮ ಜಪ

ನಗರದ ಶ್ರೀ ರಾಮ ಮಂದಿರದಲ್ಲಿ ಶ್ರೀಧರ ಬಿಜ್ಜರಗಿ ಅವರ ನೇತೃತ್ವದಲ್ಲಿ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹತ್ತಾರು ಭಕ್ತರು ಶ್ರೀರಾಮ ಜಪ ಮಾಡಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

‘ಸಂಘರ್ಷದಿಂದ ನನಸಾದ ಕನಸು’ 

ಅಯೋಧ್ಯೆದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಭೂಮಿ ಪೂಜೆ ನೆರವೇರಿಸಿದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ನಗರ ಘಟಕದ ವತಿಯಿಂದ ನಗರದ ಮೊದಲ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ತ್ಯಾಗ ಮತ್ತು ಬಲಿದಾನ ಸಂಘರ್ಷದಿಂದ ರಾಮ ಮಂದಿರದ ಕನಸು ಇಂದು ನನಸಾಗಿದೆ ಎಂದರು.

ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು ಕೋಟಿ ಕೋಟಿ ಭಾರತೀಯರ ಕನಸು ನನಸಾಗಿದೆ. ಈ ದಿನ ಭಾರತೀಯರ ಪಾಲಿಗೆ ಅಚ್ಚಳಿಯದ ದಿನ. ರಾಮ ಮಂದಿರ ನಿರ್ಮಾಣದ ಕಾರ್ಯ ಆರಂಭಿಕ ಹಂತಕ್ಕೆ ಚಾಲನೆ ಸಿಕ್ಕಿದು ಸಂತಸದ ವಿಷಯ ಎಂದರು. 

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ, ರವಿಕಾಂತ ಬಗಲಿ, ಶಿವರುದ್ರ ಬಾಗಲಕೋಟ, ಗೋಪಾಲ ಘಟಕಾಂಬಳೆ, ಮಳುಗೌಡ ಪಾಟೀಲ, ಬಾಬು ಶಿರಶ್ಯಾಡ, ಗುರು ಗಚ್ಚಿನಮಟ, ಅಲ್ತಾಫ್‌ ಇಟಗಿ, ಶಂಕರ ಕುಂಬಾರ, ಉಮೇಶ ವಂದಾಲ, ರಾಹುಲ್ ಜಾಧವ, ರಾಜು ಬಿರಾದಾರ, ಬಸವರಾಜ ಬೈಚಬಾಳ,  ವಿಜಯ ಜೋಶಿ, ರಾಕೇಶ ಕುಲಕರ್ಣಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು