ವಿಜಯಪುರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಬಹುಮಾನ ವಿಜೇತರಾಗಿರುವುದಾಗಿ ಹೇಳಿ, ಉಡುಗೊರೆ ಕಳುಹಿಸುತ್ತಿರುವುದಾಗಿ ತಿಳಿಸಿ, ಲಾಟರಿ ವಿಜೇತರಾಗಿದ್ದೀರಿ ಎಂಬ ಸಂದೇಶ ಕಳುಹಿಸಿ, ಬ್ಯಾಂಕ್ ಖಾತೆಯ ಕೆವೈಸಿ ನವೀಕರಣ, ಎಟಿಎಂ ಅವಧಿ ನವೀಕರಣ ಮತ್ತಿತರ ಕಾರಣ ಹೇಳಿ ಜಿಲ್ಲೆಯ ಅನೇಕ ಬ್ಯಾಂಕ್ ಖಾತೆದಾರರ ವಿವರ ಪಡೆದು ಆನ್ಲೈನ್ ಮೂಲಕ ಹಣ ಲಪಟಾಯಿಸಿದ ಪ್ರಕರಣಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ನಡೆಸಿದ ವಿಜಯಪುರ ಜಿಲ್ಲಾ ಸೈಬರ್ ಪೊಲೀಸರು, ಮೋಸ ಹೋದವರಿಗೆಹಣ ಮರು ಪಾವತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ್, ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ದಾಖಲಾದ ಒಟ್ಟು 31 ಸೈಬರ್ (ಆನ್ಲೈನ್ ವಂಚನೆ)ಅಪರಾಧ ಪ್ರಕರಣಗಳಲ್ಲಿ ₹39,99,854 ಹಣ ಕಳೆದುಕೊಂಡಿರುವವರಿಗೆ, ಸದ್ಯ ₹24,45,729 ಹಣವನ್ನು ಮರಳಿ ನೊಂದವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸಲಾಗಿದೆ ಎಂದು ಹೇಳಿದರು.

ಸೈಬರ್ ಆನ್ಲೈನ್ ವಂಚನೆಗೆ ಒಳಗಾದವರು ಗೋಲ್ಡನ್ ಹವರ್ (1 ಗಂಟೆ ಒಳಗೆ)ದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ವರದಿ ಮಾಡಿದ ಹಾಗೂ ಎಂಎಚ್ಎ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಹೆಲ್ಪ್ಲೈನ್ ನಂಬರ್ 1930ಗೆ ಕರೆ ಮಾಡಿ ವರದಿ ಮಾಡಿದರೆ ಆ ಕ್ಷಣವೇ ತನಿಖೆ ಕೈಕೊಂಡು ನೊಂದ ದೂರುದಾರರಿಗೆ ಹಣ ಮರಳಿ ಜಮಾ ಮಾಡಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ರಾಮ ಎಲ್. ಅರಸಿದ್ದಿ, ಡಿಸಿಆರ್ಬಿ ಡಿಎಸ್ಪಿ ಜೆ.ಎಸ್.ನ್ಯಾಮಗೌಡರ, ಸಿಇಎನ್ ಪೊಲೀಸ್ ಇನ್ಸ್ಪೆಕ್ಟರ್ರಮೇಶ ಅವಜಿ ಹಾಗೂಪಿಎಸ್ಐ ಪಿ.ವೈ. ಅಂಬಿಗೇರ, ಎ.ಎನ್.ಗುಡ್ಡೋಡಗಿ, ಸಿಬ್ಬಂದಿಗಳಾದ ಆರ್.ವಿ.ನಾಯಕ, ಎ.ಎಲ್.ದೊಡಮನಿ, ಎಂ.ಎಂ.ಕುರವಿನಶೆಟ್ಟಿ, ಪಿ.ಎಂ.ಪಾಟೀಲ, ಆರ್.ಎಂ.ಬೂದಿಹಾಳ, ಆರ್.ಬಿ.ಕೋಳಿ, ಎಂ.ಎಚ್.ಖಾನೆ, ಸಿದ್ದು ದಾನಪ್ಪಗೊಳ, ಎಸ್.ಐ.ಹೆಬ್ಬಾಳಟ್ಟಿ, ಕೆ.ಜೆ.ರಾಠೋಡ, ಎ.ಎಚ್.ಪಾಟೀಲ , ಎಸ್.ಆರ್.ಬಡಚಿ, ಎಸ್.ಎಸ್.ಕೆಂಪೇಗೌಡ, ಡಿ.ಆರ್.ಪಾಟೀಲ, ವಿ.ಎಸ್. ಹೂಗಾರ ಅವರಿಗೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ನಗದು ಬಹುಮಾನ ನೀಡಿ ಗೌರವಿಸಿದರು.

ಸೈಬರ್ ಅಪರಾಧ ತಡೆಗೆ ಪೊಲೀಸರ ಸಲಹೆ

*ವಾಟ್ಸ್ ಆ್ಯಪ್ ಅಪ್ಲಿಕೇಶನ್ ಅನ್ನು ವಾಟ್ಸ್ಆ್ಯಪ್.ಕಾಂ ವೆಬ್ಸೈಟ್ಗೆ ಹೋಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕು

*ವಾಟ್ಸ್ ಆ್ಯಪ್ ಡಿಪಿ, ಲಾಸ್ಟ್ ಸೀನ್, ಸ್ಟೇಟಸ್ ಎಲ್ಲರೂ ನೋಡದಂತೆ ಪ್ರೈವೆಸಿ ಮಾಡುವುದು

*ವಾಟ್ಸ್ ಆ್ಯಪ್ ವೆಬ್ ಬಳಸಿದ ನಂತರ ತಪ್ಪದೇ ಲಾಗ್ಔಟ್ ಮಾಡುವುದು

*ಫೇಸ್ಬುಕ್ ಖಾತೆಯ ಪಾಸ್ವರ್ಡ್ ಆಗಾಗ ಬದಲಾವಣೆ ಮಾಡುತ್ತಿರಬೇಕು

*ಖಾತೆಯ ಪ್ರೊಪೈಲ್ ಅನ್ನು ಎಲ್ಲರೂ ನೋಡದಂತೆ ಸೆಕ್ಯೂರ್ ಮಾಡಬೇಕು

*ಫೇಸ್ಬುಕ್ ಖಾತೆಯಲ್ಲಿ ತಮ್ಮ ವೈಯಕ್ತಿಕ ಅಂಶಗಳಾದ ಮೊಬೈಲ್ ನಂಬರ್, ಇಮೇಲ್ ಐಡಿಗಳನ್ನು ಎಲ್ಲರಿಗೂ ಕಾಣಿಸದಂತೆ ‘ಓನ್ಲಿ ಮಿ’ ಎಂದು ಸೆಟ್ಟಿಂಗ್ ಇಟ್ಟುಕೊಳ್ಳಬೇಕು

*ಫೇಕ್ ಅಥವಾ ನಕಲಿ ಫೇಸ್ಬುಕ್ ಖಾತೆಗೆ ತಮ್ಮ ಓರಿಜನಲ್ ಖಾತೆಯಿಂದ ಫೇಕ್ ಅಕೌಂಟ್ ಎಂದು ರಿಪೋರ್ಟ್ ಮಾಡಬೇಕು

*ಒಂದಕ್ಕಿಂತ ಹೆಚ್ಚುನ ಅಕೌಂಟ್ಗಳನ್ನು ಹೊಂದಿದ್ದಲ್ಲಿ ಡಿಲಿಟ್ ಮಾಡಬೇಕು

*ಗುರುತು, ಪರಿಚಯ ಇಲ್ಲದ ಮತ್ತು ಸುಂದರ ಹೆಣ್ಣು ಮಕ್ಕಳ ವಿಡಿಯೊ ಕಾಲ್ ಸ್ವೀಕರಿಸಬಾರದು

*ಅಪರಿಚಿತ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬಾರದು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಕಳವು ಪ್ರಕರಣದ ವಿಡಿಯೊ ತುಣುಕುಗಳು ನಮ್ಮ ಜಿಲ್ಲೆಗೆ ಸಂಬಂಧಪಟ್ಟಿದ್ದಲ್ಲ. ಅಲ್ಲದೇ, ಇದು ನಕಲಿ ವಿಡಿಯೊ. ಜನರು ಅನಗತ್ಯ ಭಯ, ಗಾಬರಿ ಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸುವುದು ಅಗತ್ಯ

–ಎಚ್.ಡಿ.ಆನಂದಕುಮಾರ್, ಎಸ್ಪಿ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.