ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಮಗ್ರ ಕೌಶಲ ಹೆಚ್ಚಿಸಲು ಕಾರ್ಯಾಗಾರ ಆಯೋಜನೆ’

Published : 28 ಸೆಪ್ಟೆಂಬರ್ 2024, 16:14 IST
Last Updated : 28 ಸೆಪ್ಟೆಂಬರ್ 2024, 16:14 IST
ಫಾಲೋ ಮಾಡಿ
Comments

ವಿಜಯಪುರ: ನಗರದ ಸಿಕ್ಯಾಬ್ ಸಂಸ್ಥೆಯ ಸಿಕ್ಯಾಬ್‌ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್‌ ವಿಭಾಗದಲ್ಲಿ ಎಸಿಸಿ ಸಿಮೆಂಟ್ ಕಂಪನಿಯ ಸಹಯೋಗದಲ್ಲಿ ಈಚೆಗೆ ‘ಸಮಗ್ರ ಕೌಶಲ ನಿರ್ಮಾಣ ಅಭಿಯಾನ’ ಕಾರ್ಯಾಗಾರ ಜರುಗಿತು.

ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಜ್ಞಾನ ಸುಧಾರಿಸುವ ಉದ್ದೇಶದಿಂದ ಸ್ಥಳೀಯ ಗುತ್ತಿಗೆದಾರರು, ಮಾರಾಟಗಾರರು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಸಿವಿಲ್‌ ವಿಭಾಗ ಮುಖ್ಯಸ್ಥ ಎ.ಎ.ದುಂಡಸಿ ಅವರು, ಸಿಮೆಂಟ್ ಕಾಂಕ್ರೀಟ್‌ಗಳಲ್ಲಿ ಅದರ ಗುಣಮಟ್ಟದ ನಿಯಂತ್ರಣ, ಹೇಗೆ ಬಳಕೆ ಮಾಡುವುದು, ಗುತ್ತಿಗೆದಾರರು ಹಾಗೂ ಮಾರಾಟಗಾರರು ಹೇಗೆ ಕೌಶಲ ಹೆಚ್ಚಿಸಿಕೊಳ್ಳುವುದು, ಗುಣಮಟ್ಟದ ನಿಯಂತ್ರಣ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಧ್ಯಯನ ಕ್ಷೇತ್ರಗಳಲ್ಲಿ ಹೇಗೆ ಕಾರ್ಯನಿರ್ವಹಣೆ ಮಾಡುವುದು ಎಂಬ ಕುರಿತು ವಿವರಿಸಿದರು.

ಪ್ರಾಚಾರ್ಯ ಅಬ್ಬಾಸ ಅಲಿ, ಚೇತನ ಮರೋಳ, ಕಿರಣ ಕುಮಾರ ಆಳಂದ, ಐತೆಶಾಮ್, ಶಿವಾನಂದ, ಮುಸ್ಕಾನ್ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT