ತಿಕೋಟಾ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಲಾಗಿರುವ ಬೈಕುಗಳು–ಪ್ರಜಾವಾಣಿ ಚಿತ್ರ
ತಿಕೋಟಾ ಪಟ್ಟಣದಲ್ಲಿ ಸರ್ಕಾರಿ ಸ್ಥಳದ ಕೊರತೆ ಇದೆ. ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಸ್ಥಳ ನಿಗದಿಯಾದರೆ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ.
ರಘು ನಡುವಿನಮನಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ರಸ್ತೆ ವಿಸ್ತರಣೆ ಮಾಡುವಾಗಲೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿತ್ತು. ಫುಟ್‌ಪಾತ್ ಮೇಲೆ ಸಹ ಅಂಗಡಿಕಾರರು ಪತ್ರಾಸ್ ಆ್ಯಂಗಲ್ ಪೈಪ್ ಹಾಕಿದ್ದಾರೆ ಅವುಗಳನ್ನು ತೆಗೆಸಬೇಕು
ಸುರೇಶ ಕೋಣ್ಣೂರ, ನಿವಾಸಿ ತಿಕೋಟ
ರಸ್ತೆ ಮೇಲೆ ವಾಹನ ನಿಲುಗಡೆ ಸಂಪೂರ್ಣ ನಿಲ್ಲಬೇಕು. ಶುಲ್ಕ ನಿಗದಿ ಮಾಡಿದರು ಪರವಾಗಿಲ್ಲ ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಆಗಬೇಕು.
ರಾಜೇಂದ್ರ ಕುಲಕರ್ಣಿ, ಸಾಮಾಜಿಕ ಕಾರ್ಯಕರ್ತ
ಪಾರ್ಕಿಂಗ್ ಸ್ಥಳ ನಿಗದಿಯಾಗುವವರೆಗೂ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಯಾವುದೇ ತೊಂದರೆಯಾಗದಂತೆ ಟ್ರಾಫಿಕ್ ನಿಭಾಯಿಸುತ್ತೇವೆ. ಸಾರ್ವಜನಿಕರು ಕೂಡ ಸಹಕರಿಸಬೇಕು