ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಡೋಣಿ ನದಿ ಪ್ರವಾಹಕ್ಕೆ ಸಿಲುಕಿದ್ದ ಎತ್ತಿನ ಬಂಡಿ ರಕ್ಷಣೆ

Last Updated 9 ಸೆಪ್ಟೆಂಬರ್ 2020, 13:25 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ತಾಳಿಕೋಟೆಯಲ್ಲಿ ಡೋಣಿ ನದಿಯಲ್ಲಿ ಬುಧವಾರ ಮಧ್ಯಾಹ್ನ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.

ತಾಳಿಕೋಟೆ–ಹಡಗಿನಾಳ ಸಂಪರ್ಕಿಸುವ ನೆಲಮಟ್ಟದ ಚಿಕ್ಕ ಸೇತುವೆಡೋಣಿ ನದಿ ಪ್ರವಾಹದಲ್ಲಿ ಮುಳುಗಿತ್ತು. ಎತ್ತಿನ ಬಂಡಿ ಮೂಲಕ ಸೇತುವೆ ದಾಟಿ ಹೊಲಕ್ಕೆ ಹೋಗಲು ಮೂವರು ರೈತರು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಂಡಿ ಸಮೇತ ನಡು ನೀರಿನಲ್ಲಿ ಸೆಳವಿಗೆ ಸಿಲುಕಿಕೊಂಡಿದ್ದರು. ಸುದ್ದಿ ತಿಳಿದ ಸ್ಥಳೀಯರು ತಕ್ಷಣ ಎತ್ತಿನ ಬಂಡಿಯನ್ನು ದಡಕ್ಕೆ ಎಳೆದು, ಅಪಾಯದಿಂದ ಪಾರು ಮಾಡಿದರು.

ಆಕ್ರೋಶ: ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ಕಾಮಗಾರಿ ಅವಧಿ ಮುಗಿದರೂ ಪೂರ್ಣವಾಗದೇ ನನೆಗುದಿಗೆ ಬಿದ್ದಿರುವುದರಿಂದ ಪ್ರತಿ ವರ್ಷ ಸಮಸ್ಯೆ ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ವಿವರ: ವಿಜಯಪುರ ನಗರದಲ್ಲಿ 13.6 ಮಿ.ಮೀ.,ಹೂವಿನ ಹಿಪ್ಪರಗಿ 12.4, ಬಸವನ ಬಾಗೇವಾಡಿ 0.2, ನಾಗಠಾಣ 9.1, ಭೂತನಾಳ 17.4, ಹಿಟ್ನಳ್ಳಿ 1.4, ಮಮದಾಪೂರ 2.6, ಕುಮಟಗಿ 10.4, ಕನ್ನೂರ 64.5, ಇಂಡಿ 3, ನಾದ ಬಿ.ಕೆ 3, ಝಳಕಿ 0.8, ಮುದ್ದೇಬಿಹಾಳ 4, ನಾಲತವಾಡ 8.4, ತಾಳಿಕೋಟಿ 3.3, ಸಿಂದಗಿ 26, ಆಲಮೇಲ 5.8, ರಾಮನಹಳ್ಳಿ 4.2, ದೇವರ ಹಿಪ್ಪರಗಿ 2.5 ಮಿ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT