ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ; ಸೇತುವೆ ಮುಳುಗಡೆ

Last Updated 21 ಸೆಪ್ಟೆಂಬರ್ 2020, 11:48 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಧಾರಾಕಾರ ಮಳೆ ಸುರಿಯಿತು.

ತಾಳಿಕೋಟೆ–ಹಡಗಿನಾಳ ಸಂಪರ್ಕ ಸೇತುವೆ ಡೋಣಿ ನದಿಯ ಪ್ರವಾಹದಲ್ಲಿ ಮುಳುಗಿದ ಪರಿಣಾಮ ಸಂಚಾರ ಸ್ಥಗಿತವಾಗಿತ್ತು.

ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ, ಕಲ್ಲದೇನಹಳ್ಳಿ, ಹಗರಗೊಂಡ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಈ ಭಾಗದ ಜನರು ಮಿಣಜಗಿ ಮಾರ್ಗವಾಗಿ 10ರಿಂದ 18 ಕಿ.ಮೀ.ದೂರ ಸುತ್ತಿಬಳಸಿ ತಾಳಿಕೋಟೆಗೆ ಬರುವಂತಾಗಿದೆ.

ಮಳೆ ವಿವರ:ಕನ್ನೂರಿನಲ್ಲಿ 74.2 ಮಿ.ಮೀ.ಮಳೆಯಾಗಿದೆ. ಹೊರ್ತಿ58.4,ಸಿಂದಗಿ 30, ಕುಮಟಗಿ 21.4,ಢವಳಗಿ 20,ಬಸನ ಬಾಗೇವಾಡಿಯಲ್ಲಿ 3.2, ಆಲಮಟ್ಟಿ 0.8, ಹೂವಿನ ಹಿಪ್ಪರಗಿ 4.6, ಅರೇಶಂಕರ 2.4, ಮಟ್ಟಿಹಾಳ 2, ವಿಜಯಪುರ 4.8, ನಾಗಠಾಣ 6.1, ಭೂತನಾಳ 13.8, ಹಿಟ್ನಳ್ಳಿ 4, ತಿಕೋಟಾ 4.2, ಇಂಡಿ 17.5, ನಾದ ಬಿ.ಕೆ 5, ಅಗರಖೇಡ 4.3, ಹಲಸಂಗಿ 5, ಚಡಚಣ 3.4, ಝಳಕಿ 5.1, ಮುದ್ದೇಬಿಹಾಳ 49,ನಾಲತವಾಡ 19.6, ತಾಳಿಕೋಟಿ 6.5, ಆಲಮೇಲ 8.5, ಸಾಸಾಬಾಳ 3.3, ರಾಮನಹಳ್ಳಿ 4.8, ಕಡ್ಲೇವಾಡ 15,ದೇವರ ಹಿಪ್ಪರಗಿ 18,ಕೊಂಡಗೂಳಿ 5.5 ಮಿ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT