ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲತವಾಡ | ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಶೆಡ್‌ ಕುಸಿತ

Published : 22 ಆಗಸ್ಟ್ 2024, 15:37 IST
Last Updated : 22 ಆಗಸ್ಟ್ 2024, 15:37 IST
ಫಾಲೋ ಮಾಡಿ
Comments

ನಾಲತವಾಡ: ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳಗೆ ಒಂಟಿಯಾಗಿ ವಾಸಿಸುತ್ತಿದ್ದ ವೃದ್ದೆಯ ತಗಡಿನ ಶೆಡ್‌ ಕುಸಿದಿರುವ ಘಟನೆ ನಡೆದಿದೆ.

ಪಟ್ಟಣದ 12ನೇ ವಾರ್ಡ್‌ ನಿವಾಸಿ ಫಾತಿಮಾ ಕೊಳೂರ ಎಂಬ ವೃದ್ಧೆ ಕಾಳಮ್ಮ ದೇವಸ್ಥಾನದ ಹತ್ತಿರ ಕುಲಕರ್ಣಿ ಎಂಬುವವರ ಖಾಲಿ ಜಾಗದಲ್ಲಿ ಸಣ್ಣ ತಗಡಿನ ಶೆಡ್‌ ನಿರ್ಮಸಿ ವಾಸ ಮಾಡುತಿದ್ದರು. ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಶೆಡ್‌ ಪಕ್ಕ ಇರುವ ಮನೆಯ ಗೋಡೆ ಕುಸಿದ ಕಾರಣ ಗೋಡೆಯ ಕಲ್ಲುಗಳು ಶೆಡ್‌ ಮೇಲೆ ಬಿದ್ದು ಸಂಪೂರ್ಣ ನೆಲಕ್ಕೆ ಉರುಳಿದೆ. ಸಮಯಕ್ಕೆ ಸರಿಯಾಗಿ ಶೆಡ್‌ನಿಂದ ಹೊರ ಬಂದಿದ್ದರಿಂದ ವೃದ್ಧೆಗೆ ಯಾವುದೇ ಅನಾಹುತ ಸಂಭವಿಸಿಲ್ಲ.

ಬೇಕಿದೆ ಆಸರೆ: ಫಾತಿಮಾರ ಪತಿ ತೀರಿ ಹೋಗಿದ್ದು, ಮಕ್ಕಳು ಸಹ ಇಲ್ಲ. ಒಬ್ಬಂಟಿಯಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದರು. ಶೆಡ್‌ ಕುಸಿದು ಬಿದ್ದಿದ್ದರಿಂದ ಪಕ್ಕದ ಮನೆಯಲ್ಲಿ ರಾತ್ರಿ ಕಳೆದಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಹಾಗೂ ವಾರ್ಡಿನ ಸದಸ್ಯರು ಕೂಡಲೇ ವೃದ್ಧೆಗೆ ಆಶ್ರಯ ನಿರ್ಮಿಸಿಕೊಡಲು ಸಹಾಯ ಹಸ್ತ ಚಾಚಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಪೋಟೋ:22ಎನ್.ಎಲ್ಟಿ1 ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಫಾತಿಮಾ ಕೊಳೂರ ವೃದ್ದೆಯ ತಗಡಿನ ಶಡ್ಡ ಮೇಲೆ ಗೋಡೆ ಕುಸಿದು ಬಿದ್ದಿರುವ ದೃಷ್ಯ.
ಪೋಟೋ:22ಎನ್.ಎಲ್ಟಿ1 ಪಟ್ಟಣದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಫಾತಿಮಾ ಕೊಳೂರ ವೃದ್ದೆಯ ತಗಡಿನ ಶಡ್ಡ ಮೇಲೆ ಗೋಡೆ ಕುಸಿದು ಬಿದ್ದಿರುವ ದೃಷ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT