ವಿಜಯಪುರ: ವಿಜಯಪುರ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ 8ಕ್ಕೆ ಆರಂಭವಾಗಿರುವ ಮಳೆಯು ಎರಡು ತಾಸುಗಳಿಂದ ಬಿಡುವು ನೀಡದೆ ಸುರಿಯುತ್ತಿದೆ.

ಮಳೆಯ ಆರ್ಭಟಕ್ಕೆ ವಿಜಯಪುರದ ಜನ ಜೀವನ ಅಸ್ತವ್ಯಸ್ತವಾಗಿದೆ.

ಗುಡುಗು, ಸಿಡಿಲು, ಮಿಂಚಿನೊಂದಿಗೆ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಬಸ್ಸು, ರೈಲುಗಳಲ್ಲಿ

ನಗರದಿಂದ ವಿವಿಧೆಡೆಗೆ ತೆರಳಬೇಕಾಗಿದ್ದ ಪ್ರಯಾಣಿಕರು ವಾಹನಗಳ ಸಂಚಾರ ವಿರಳವಾಗಿದ್ದ ಕಾರಣ ಪರದಾಡಿದರು.

ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭಿಸಿಲ್ಲ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ತಾಸುಗಳಲ್ಲಿ ವಿವಿಧೆಡೆ ದಾಖಲೆ ಮಳೆ ಸುರಿದಿರುವ ವರದಿಯಾಗಿದೆ.

ತೊರವಿಯಲ್ಲಿ 6.5 ಸೆ.ಮೀ.,ಉಕ್ಕಲಿಯಲ್ಲಿ 7.3 ಸೆ.ಮೀ.,ಕೋಟ್ಯಾಳದಲ್ಲಿ 6.6ಸೆ.ಮೀ. ಮಳೆಯಾಗಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.