ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಶಂಕರ ಜಯಂತಿ ಆಚರಣೆ

Last Updated 9 ಮೇ 2019, 14:21 IST
ಅಕ್ಷರ ಗಾತ್ರ

ವಿಜಯಪುರ:ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಜ್ರ ಹನುಮಾನ ಬಡಾವಣೆಯಲ್ಲಿನ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನದ ಶೃಂಗೇರಿ ಶಾಖಾ ಮಠದಲ್ಲಿ ಗುರುವಾರ ಆದಿಶಂಕರಾಚಾರ್ಯರ ಜಯಂತಿ, ಉತ್ಸವವನ್ನು ಭಕ್ತಿ ಸಡಗರಗಳಿಂದ ಆಚರಿಸಲಾಯಿತು.

ಶೃಂಗೇರಿ ಪೀಠಾಧಿಪತಿ ಭಾರತಿ ತೀರ್ಥ ಸ್ವಾಮೀಜಿ ಸೂಚನೆಯಂತೆ, ಶಾರದಾ ದೇವಿಯ ಸನ್ನಿಧಿಯಲ್ಲಿ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ, ಶ್ರೀ ಗುರು ಪ್ರಾರ್ಥನೆಯೊಂದಿಗೆ, ಶಾರದಾ ದೇವಿಯವರಿಗೆ ಪುರಾಣೋಕ್ತ ವಿವಿಧ ಅಲಂಕಾರ ಸೇವೆ, ಲಲಿತಾ ಸಹಸ್ರ ನಾಮಾರ್ಚನೆ, ಮಂತ್ರ ಪಠಣ ಮುಂತಾದ ವಿವಿಧ ವೈದಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಬಾಲ ಶಂಕರರನ್ನು ತೊಟ್ಟಿಲಲ್ಲಿ ಹಾಕಿ, ನಾಮಕರಣ ಮಾಡುವ ಮೂಲಕ ಮಹಿಳಾ ಭಕ್ತಾದಿಗಳು ಸಂಭ್ರಮ ಪಟ್ಟರು. ಶಂಕರರ ಬಾಲ ಲೀಲೆಗಳನ್ನು ಸಹ ಇದೇ ಸಂದರ್ಭದಲ್ಲಿ ನೆನೆದು ಸ್ಮರಿಸಲಾಯಿತು.

ಶಂಕರ ಸೇವಾ ಸಮಿತಿಯ ಪದಾಧಿಕಾರಿಗಳಾದ ಮಹೇಶ ದೇಶಪಾಂಡೆ, ಪ್ರಮೋದ ಅಥಣಿ, ದತ್ತಾತ್ರೇಯ ಇನಾಂದಾರ, ಗಂಗಾಧರ ದೇಶಪಾಂಡೆ, ಶಾಮಭಟ್ಟ ಜೋಶಿ, ಸತ್ಯನಾರಾಯಣ ಸಿದ್ಧಾಂತಿ, ಶಂಕರ ಕುಲಕರ್ಣಿ (ಗಿರಗಾವಿ), ಸಂಜೀವ ಬೀಳಗಿ, ಅರುಣ ಸೋಲಾಪುರಕರ, ಹಣಮಂತ ವೈದ್ಯ, ಆನಂದ ಭಟ್ಟ ಜೋಶಿ, ಕೃಷ್ಣ ಗಲಗಲಿ, ಸಂಜೀವಭಟ್ಟ ಬೀಳಗಿ ಉಪಸ್ಥಿತರಿದ್ದರು.

ಜಿಲ್ಲಾಡಳಿತದಿಂದ ಜಯಂತಿ
ಜಿಲ್ಲಾಡಳಿತದ ವತಿಯಿಂದ ಗುರುವಾರ ಬೆಳಿಗ್ಗೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಶಂಕರಾಚಾರ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ., ಸಮಾಜದ ಮುಖಂಡರಾದ ಗೋಪಾಲ ನಾಯಕ ಉಪಸ್ಥಿತರಿದ್ದು, ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ಮಂತ್ರಪಠಣ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT