ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಸ್ತೆಯಲ್ಲಿಯೇ ಕುರಿಗಳ ಸಂತೆ ನಡೆಯುವುದು ನಿಜ. ಕುರಿ ಮಾರಾಟ ಮಾಡುವವರಿಗೆ ಸಾಕಷ್ಟು ಸಲ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಕುರಿ ಸಂತೆಗಾಗಿಯೇ ₹40 ಲಕ್ಷ ರೂಪಾಯಿ ವೆಚ್ಚದಲ್ಲಿ ಕುರಿ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಿ ತುಂಬಾ ವರ್ಷಗಳೇ ಆಗಿವೆ. ಆದರೆ, ಅದರ ಉಪಯೋಗ ಆಗುತ್ತಿಲ್ಲ. ಕುರಿ ವ್ಯಾಪಾರಿಗಳು ಅಲ್ಲಿ ಕುರಿಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು, ಎಪಿಎಂಸಿ ವ್ಯಾಪಾರಸ್ಥರಿಗೂ ತುಂಬಾ ತೊಂದರೆಯಾಗಿದೆ.
- ಬಸವರಾಜ ಜುಮನಾಳ, ಎಪಿಎಂಸಿ ಕಾರ್ಯದರ್ಶಿ
ಭಾನುವಾರಕ್ಕೊಮ್ಮೆ ಎಪಿಎಂಸಿ ವ್ಯಾಪಾರಸ್ಥರು ಆವರಣದಲ್ಲಿ ರಸ್ತೆಯಲ್ಲಿಯೇ ಕುರಿ ವ್ಯಾಪಾರ ನಡೆದಿರುತ್ತದೆ. ಕುರಿಗಳ ವ್ಯಾಪಾರಕ್ಕಾಗಿ ನಿಗದಿತ ಸ್ಥಳ ಇದ್ದರೂ ಅಲ್ಲಿಗೆ ಹೋಗುತ್ತಿಲ್ಲ. ನಮ್ಮ ವ್ಯಾಪಾರ ಕೆಲವು ಗಂಟೆಗಳ ಕಾಲ ಸ್ಥಗಿತಗೊಳ್ಳುತ್ತದೆ. ಆವರಣದಲ್ಲಿ ಲಾರಿಗಳು ಬರಲು ನಿರ್ಬಂಧ ಎಂಬಂತಾಗಿದೆ. ಹೀಗಾಗಿ ಕುರಿ ಸಂತೆಗಾಗಿ ಪಟ್ಟಣದ ಹೊರಗಡೆ ಪ್ರತ್ಯೇಕ ಜಾಗೆ ಗುರುತಿಸುವುದು ಅಗತ್ಯವಾಗಿದೆ. ಈ ಕುರಿತು ಶಾಸಕರಿಗೆ ಮನವಿ ಮಾಡಲಾಗುವುದು.
– ಉಮೇಶ ಜೋಗೂರ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ
ಕುರಿ ಸಂತೆಯನ್ನು ರಸ್ತೆಯಲ್ಲಿ ಮಾಡುವುದಕ್ಕೆ ಕಡಿವಾಣ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಮುಂಬರುವ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗುವುದು
– ಸದ್ದಾಂಪಟೇಲ್ ಬಿರಾದಾರ, ಎಪಿಎಂಸಿ ಸದಸ್ಯ
ಸಿಂದಗಿ ಪಟ್ಟಣದ ಕೃಷಿ ಉತ್ಪನ್ ಮಾರುಕಟ್ಟೆ ಆವರಣದ ಮುಖ್ಯಧ್ವಾರದಲ್ಲಿ ರಸ್ತೆಯಲ್ಲಿಯೇ ಕುರಿಗಳ ಸಂತೆ