ಸಿಂದಗಿ: ‘ಶಾಸಕ ಅಶೋಕ ಮನಗೂಳಿ ಹಾಗೂ ಅವರ ಕುಟುಂಬ ನಗರದ ಹಲವೆಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲಿಗಳಿವೆ’ ಎಂದು ಬಿಜೆಪಿಯ ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆರೋಪಕ್ಕೆ ಪೂರಕವಾಗಿ ದಾಖಲೆಗಳನ್ನು ಪ್ರದರ್ಶಿಸಿದರು.

‘ಸ.ನಂ.771ರಲ್ಲಿ ಗೊಲ್ಲರ ಸಮುದಾಯಕ್ಕೆ ಸೇರಿದ ಆಯಕಟ್ಟಿನ ಪ್ರದೇಶವನ್ನು ಶಾಸಕರ ಕುಟುಂಬ ಕಬಳಿಕೆ ಮಾಡಿಕೊಂಡು, ತಾಲ್ಲೂಕು ಶಿಕ್ಷಣ ಪ್ರಸಾರಕ ಸಹಕಾರಿ ಮಂಡಳಿಯ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿ ಅದನ್ನು ಈಗ ಲೀಸ್ಗೆ ಕೊಟ್ಟಿದೆ’ ಎಂದು ಆಪಾದಿಸಿದರು.

‘ಬಸ್ ನಿಲ್ದಾಣದ ಬಳಿ ಸ.ನಂ 1028ರಲ್ಲಿ 3 ಎಕರೆ 35 ಗುಂಟೆ ನಿವೇಶನವನ್ನು 1944ರಲ್ಲಿ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಗೆ ದಾನ ಕೊಟ್ಟ ಆಸ್ತಿಯನ್ನು ಕೃಷಿಯೇತರ ಜಮೀನು ಎಂದು ಮಾಡಿಸಿ ಪ್ಲಾಟ್ಗಳ ಮಾರಾಟ ಮಾಡಿಕೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಗೆ ದಾನವಾಗಿ ಕೊಟ್ಟ ವಿರಕ್ತಮಠದ ಆಸ್ತಿಯನ್ನು ಎಂ.ಸಿ.ಮನಗೂಳಿಯವರು ಮಾರಾಟ ಮಾಡಿದ್ದಾರೆ’ ಎಂದು ದೂರಿದರು.

‘ನಗರದ 842/ಅ 3 ಎಕರೆ 35 ಗುಂಟೆ ಈ ಆಸ್ತಿ ಈ ವರೆಗೂ ಮಲ್ಲಪ್ಪ ಚನವೀರಪ್ಪ ಮನಗೂಳಿ ಅವರ ಹೆಸರಿಯಲ್ಲಿಯೇ ಉತಾರ ಇದೆ. ಈ ಜಮೀನಿನಲ್ಲಿ ಪುರಸಭೆ ವತಿಯಿಂದ 140 ಜನರಿಗೆ ಹಕ್ಕುಪತ್ರ ಹಂಚಿ ಮನೆಗಳು ನಿರ್ಮಾಣಗೊಂಡಿವೆ. ಈ ಆಸ್ತಿಯನ್ನು ಇನ್ನೂ ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. ಸದ್ಯದ ಉತಾರ ಪ್ರದರ್ಶಿಸಿ ಚುನಾವಣೆ ಸಂದರ್ಭದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಮತ ಪಡೆಯುವ ದುರುದ್ದೇಶ ಹೊಂದಿದ್ದಾರೆ’ ಎಂದು ಭೂಸನೂರ ದೂರಿದರು.

‘ನಗರದಲ್ಲಿನ ಮಹಾತ್ಮಗಾಂಧಿ ವೃತ್ತ, ಪುತ್ಥಳಿ ಕಿತ್ತು ಹಾಕಿ ಅಲ್ಲಿ ಅಶೋಕ ಸ್ತಂಭ ನಿರ್ಮಾಣ ಮಾಡಿದ್ದಾರೆ. ಪುರಸಭೆಯ ಠರಾವು ಇಲ್ಲ, ಅಗತ್ಯ ಅನುಮತಿಯೂ ಇಲ್ಲ’ ಎಂದು ಆರೋಪಿಸಿದರು.

‘ನಾನು ಶಾಸಕನಾದ 12 ವರ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪುಸ್ತಕವಾಗುವಷ್ಟಿವೆ. ಶಿಕ್ಷಣ, ವಿದ್ಯುತ್ ಹಾಗೂ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮತಕ್ಷೇತ್ರದಲ್ಲಿ ಕೇವಲ 16 ತಿಂಗಳ ಅವಧಿಯಲ್ಲಿ 120 ಕಿ.ಮೀ. ರಸ್ತೆ ಮಾಡಲಾಗಿದೆ. ಮನಗೂಳಿ ಶಾಸಕರಾದ ಎರಡೂವರೆ ವರ್ಷದ ಅವಧಿಯಲ್ಲಿ ಸಿಂದಗಿ ನಗರದಲ್ಲಿ 1 ಕಿ.ಮೀ. ಡಾಂಬರೀಕರಣ ರಸ್ತೆಯಾಗಿದೆಯಾ? ಕೆಲವು ಕಡೆ ಲಾಭ ತರುವ ಸಿ.ಸಿ ರಸ್ತೆಗೆ ಗಂಟು ಬಿದ್ದಿದ್ದಾರೆ’ ಎಂದು ದೂರಿದರು.

‘ನನ್ನ ಅವಧಿಯಲ್ಲಿ ಟೆಂಡರ್ ಆಗಿದ್ದ ಹಲವಾರು ಕಾಮಗಾರಿಗಳನ್ನು ರದ್ದುಪಡಿಸಿ ಅದೇ ಅನುದಾನವನ್ನು ಈಗ ತಮ್ಮ ಕಾಮಗಾರಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಭಂಡತನ ಪ್ರದರ್ಶಿಸುತ್ತಿದ್ದಾರೆ. ನಗರದಲ್ಲಿ ನನ್ನ ಅವಧಿಯಲ್ಲಿ ನಿರ್ಮಾಣಗೊಂಡ ರಸ್ತೆಗಳಲ್ಲಿ ಲೈಟ್ ಕಂಬ ಮಾತ್ರ ಹಾಕಿದ್ದಾರೆ’ ಎಂದು ಟೀಕಿಸಿದರು.

ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಇದ್ದರು.

ಶಾಸಕ ಅಶೋಕ ಮನಗೂಳಿಯವರ ಅಧಿಕಾರ ಅವಧಿ ತುರ್ತು ಪರಿಸ್ಥಿತಿ ನೆನಪಿಸುತ್ತದೆ. ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದಾರೆ
ರಮೇಶ ಭೂಸನೂರ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.