ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಂದಗಿ ಜಿಲ್ಲೆಯಾಗಲಿ: ಆಗ್ರಹ’

Published 2 ಜನವರಿ 2024, 14:09 IST
Last Updated 2 ಜನವರಿ 2024, 14:09 IST
ಅಕ್ಷರ ಗಾತ್ರ

ಸಿಂದಗಿ: ಸಿಂದಗಿ ತಾಲ್ಲೂಕು ಜಿಲ್ಲೆಯಲ್ಲಿಯೇ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿದ್ದು. ಜಿಲ್ಲೆ ರಚನೆಗೆ ಸೂಕ್ತವಾಗಿದೆ ಎಂದು ಕರ್ನಾಟಕ ಆದಿಜಾಂಬವ ಜನಸಂಘ ಸಂಘಟನೆಯ ಉತ್ತರಕರ್ನಾಟಕ ವಲಯದ ಅಧ್ಯಕ್ಷ ಸಾಯಬಣ್ಣ ದೇವರಮನಿ ಆಗ್ರಹಿಸಿದರು.

ಕಲ್ಬುರ್ಗಿ-ಯಾದಗಿರಿ-ರಾಯಚೂರು-ವಿಜಯಪುರ ಜಿಲ್ಲೆಗಳೊಂದಿಗೆ ಸಂಪರ್ಕ ಇದೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಹೊಂದಿದೆ. ಮುಂಬರುವ ದಿನಗಳಲ್ಲಿ ಶೇಡಬಾಳ-ಶಹಾಬಾದ ರೇಲ್ವೆ ಮಾರ್ಗ ಸಿಂದಗಿಯಿಂದ ಹಾದು ಹೋಗುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳು ಸಿಂದಗಿಯಿಂದ 20-40 ಕಿ.ಮೀ ಅಂತರದಲ್ಲಿವೆ. ಹೀಗಾಗಿ ಜಿಲ್ಲೆಯಾಗಲು ಸೂಕ್ತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT